ಗೋವಾ ವರ್ಜಿನ್ ನೈಟ್ ಕ್ಲಬ್ ನರ್ತಕಿಯರ ರಕ್ಷಣೆ
ಪಣಜಿ,
ಡಿ.6: ಗೋವಾದ ಪ್ರಸಿದ್ಧ ಕಲಾಂಗುಟೆ ಬೀಚ್ ಗ್ರಾಮದಲ್ಲಿ ಖ್ಯಾತ ನೈಟ್ ಕ್ಲಬ್ ಒಂದರ ಮೇಲೆ ಸೋಮವಾರ ದಾಳಿ ನಡೆಸಿದ ಪೊಲೀಸರು 14 ನರ್ತಕಿಯರನ್ನು ರಕ್ಷಿಸಿದ್ದಾರೆ. id="toptextpromo">'ಕ್ಲಬ್
ವರ್ಜಿನ್' ಹೆಸರಿನ ಅಡ್ಡೆಯ ಮೇಲೆ ನಡೆದ ದಾಳಿಯಲ್ಲಿ 9 ಮಂದಿ ಪ್ರಮೋಟರುಗಳು ಮತ್ತು ಇತರೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯರ ಅಕ್ರಮ ಸಾಗಣೆ ಮತ್ತು ಅವರನ್ನು ಕ್ಲಬ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಆರೋಪದ ಮೇಲೆ ಈ ಬಂಧನವಾಗಿದೆ ಎಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ರಕ್ಷಣೆ
ಮಾಡಲಾದ ಕೆಲವು ಯುವತಿಯರು ಈ ಹಿಂದೆ ಮುಂಬೈನಲ್ಲಿ ಬಾರ್ ಗರ್ಲ್ ಗಳಾಗಿ ಕೆಲಸದಲ್ಲಿದ್ದವರು. ಇವರೆಲ್ಲರನ್ನೂ ಮಹಿಳಾ ಪರಿಹಾರ ಕೇಂದ್ರಕ್ಕೆ ಕಳಿಸಲಾಗಿದೆ. ಸೆಕ್ಸ್ ಮತ್ತು ಮಾದಕವಸ್ತುಗಳಿಂದಾಗಿ ಗೋವಾ ಇಡೀ ಜಗತ್ತಿನ ಗಮನಸೆಳೆಯುತ್ತಿದೆ.











Click it and Unblock the Notifications