ಗಿರಗಿರನೆ ತಿರುಗುತ್ತಿದೆ ಫ್ಯಾನ್, ತಣ್ಣನೆ ಮಲಗಿದೆ ಬಿಜೆಪಿ

ಭರ್ಜರಿ ಪೊಲೀಸ್ ಸರ್ಪಗಾವಲಿನ ನಡುವೆ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ನಡೆದಿರುವ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
7ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡ ನಂತರ ಶ್ರೀರಾಮುಲು 21,866 ಮತಗಳು ಕಾಂಗ್ರೆಸ್ಸಿನ ರಾಮಪ್ರಸಾದ್ 12,088 ಮತಗಳು ಹಾಗೂ ಬಿಜೆಪಿಯ ಗಾದಿ ಲಿಂಗಪ್ಪ ಅವರು 2978 ಮತಗಳನ್ನು ಪಡೆದಿದ್ದಾರೆ.
ಒಂದೆಡೆ ರಾಮುಲು ಅವರ ಫ್ಯಾನ್ ಗಿರಗಿರನೆ ತಿರುಗುತ್ತಿದ್ದರೆ, ಬಿಜೆಪಿಯ ಕಮಲದಳಗಳು ಉದುರುತ್ತಿದ್ದು, ಫ್ಯಾನ್ ಗಾಳಿಯಲ್ಲಿ ತಣ್ಣನೆ ಮಲಗಿಕೊಂಡಿದೆ. ಬಳ್ಳಾರಿಯ ಜನತೆ ಆಡಳಿತ ಪಕ್ಷವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದು, ಹೀನಾಯ ಸೋಲಿನ ಭೀತಿಯಲ್ಲಿ ಬಿಜೆಪಿ ಗಡಗಡ ನಡುಗುತ್ತಿದೆ.
ಇದೀಗ ಬಂದ ಸುದ್ದಿಯಂತೆ 8 ನೇ ಸುತ್ತಿನ ಆರಂಭದಲ್ಲಿ ಶ್ರೀರಾಮುಲು ಅವರು 11,367 ಅಂತರ ಕಾಯ್ದುಕೊಂಡಿದ್ದಾರೆ. ಶ್ರೀರಾಮುಲು ಅವರಿಗೆ 25713 ಮತಗಳು, ರಾಮ ಪ್ರಸಾದ್ ಗೆ 14346 ಮತಗಳು ಹಾಗೂ ಗಾದಿ ಲಿಂಗಪ್ಪ ಅವರಿಗೆ 3222 ಮತಗಳು ಬಂದಿದೆ.












Click it and Unblock the Notifications