'ಅಗ್ನಿ' ಪರೀಕ್ಷೆಯಲ್ಲಿ ಗೆದ್ದ ಗೂಗಲ್ ಕ್ರೋಮ್
ಬೋಸ್ಟನ್,
ಡಿ. 2 : 'ಅಗ್ನಿ' ಪರೀಕ್ಷೆಯಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಕೊನೆಗೂ ಜಯಶಾಲಿಯಾಗಿದೆ. ಸಾಕಷ್ಟು ಜನಪ್ರಿಯತೆ ಗಳಿಸುತ್ತಿರುವ ಗೂಗಲ್ ನ ಕ್ರೋಮ್ ಬ್ರೌಸರ್ ಮೊಟ್ಟಮೊದಲ ಬಾರಿಗೆ ಮೋಜಿಲ್ಲಾ ಫೈರ್‌ಫಾಕ್ಸ್ ಬ್ರೌಸರನ್ನು ಹಿಂದಿಕ್ಕಿದೆ. id="toptextpromo">ವೆಬ್‌ಸೈಟ್
ವಿಶ್ಲೇಷಣಾ ಸಂಸ್ಥೆ ಸ್ಟಾಟ್ ಕೌಂಟರ್ ಪ್ರಕಾರ, ನವೆಂಬರ್ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಗೂಗಲ್ ಕ್ರೋಮ್ ಶೇ.25.69 ಪಾಲು ಹೊಂದಿದ್ದರೆ, ಫೈರ್‌ಫಾಕ್ಸ್ ಪಾಲು ಶೇ.25.23. ಮೈಕ್ರೋಸಾಫ್ಟ್‌ನ ಇಂಟರ್ನೆಟ್ ಎಕ್ಸ್‌ಪ್ಲೋರರ್ ಈಗಲೂ ಅಗ್ರಸ್ಥಾನ ಕಾಪಾಡಿಕೊಂಡಿದ್ದು, ಅದರ ಪಾಲು ಶೇ.40.63ರಷ್ಟಿದೆ. id='are-slot-1' class='oiad oi-axt oiadv'> id='top-searched-articles'>ಗ್ರಾಫ್
ನಲ್ಲಿ ಮೇಲಕ್ಕೇರುತ್ತಿರುವ ಗೂಗಲ್ ಕ್ರೋಮ್ ಬ್ರೌಸರ್ ಮುಂದಿನ ದಿನಗಳಲ್ಲಿ ಮೈಕ್ರೋಸಾಫ್ಟ್ ಐಇ ಬ್ರೌಸರ್‌ಗೆ ಟಕ್ಕರ್ ನೀಡಲಿದೆ ಎಂದು ಸ್ಟಾಟ್ ಕೌಂಟರ್ ಸಿಇಓ ಆಓಧನ್ ಕಲ್ಲನ್ ಅಭಿಪ್ರಾಯಪಟ್ಟಿದ್ದಾರೆ. ಬ್ರೌಸರ್ ಬಳಕೆಯನ್ನು ಮಾತ್ರ ಆಧಾರವಾಗಿಟ್ಟು ಈ ಅಂಕಿಅಂಶಗಳಿಗೆ ಬರಲಾಗಿದೆ.











Click it and Unblock the Notifications