ಶ್ರೀಲಕ್ಷ್ಮಿಗೆ ಷರತ್ತುಬದ್ಧ ಜಾಮೀನು ನೀಡಿದ ಸಿಬಿಐ ಕೋರ್ಟ್

ಚಂಚಲಗೂಡ ಜೈಲಿನ ಮಹಿಳಾ ಸೆಲ್ ನಲ್ಲಿದ್ದ ಐಎಎಸ್ ಅಧಿಕಾರಿ ವೈ ಶ್ರೀಲಕ್ಷ್ಮಿಗೆ ವಿಚಾರಣಾಧೀನ ಕೈದಿ ಸಂಖ್ಯೆ ವಿಚಾರಣಾಧೀನ ಕೈದಿ ನಂ. 4332 ಕೂಡಾ ನೀಡಲಾಗಿತ್ತು.. ಪ್ರಕರಣದ ಸಂಬಂಧಿಸಿದಂತೆ ಸಿಬಿಐ ತಂಡ ಕೋರ್ಟಿನಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಿತ್ತು.
ಆದರೆ, ಶುಕ್ರವಾರ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡ ನ್ಯಾ. ನಾಗನಾಗಮಾರುತಿ ಶರ್ಮಾ ಅವರು ಶ್ರೀಲಕ್ಷ್ಮಿ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದ್ದಾರೆ. 25 ಸಾವಿರ ರೂ ಬಾಂಡ್, ಇಬ್ಬರ ಶ್ಯೂರಿಟಿ ನೀಡಬೇಕು. ಶ್ರೀಲಕ್ಷ್ಮಿ ಪಾಸ್ ಪೋರ್ಟ್ ಠಾಣೆಗೆ ಸಲ್ಲಿಸಬೇಕು ಎಂದು ನಾಂಪಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯ ಸೂಚಿಸಿದೆ.
ಡಿ.12ರವರೆಗೆ ನ್ಯಾಯಾಂಗ ಬಂಧನದಲ್ಲಿರಬೇಕಾಗಿದ್ದ ಶ್ರೀಲಕ್ಷ್ಮಿ ಅವರನ್ನು ಮತ್ತೆ ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಲು ಸಿಬಿಐ ತಂಡ ಬಯಸಿದೆ. ಆದರೆ, ಸಬಿತಾ ವಿಷಯದಲ್ಲಿ ಸಿಬಿಐ ತೆಗೆದುಕೊಂಡ ನಿರ್ಣಯ ಸರಿಯೇ...?












Click it and Unblock the Notifications