ಓಎಂಸಿ ಗಣಿ ಅಕ್ರಮ, ಸಿಬಿಐನಿಂದ ಸಬಿತಾಗೆ ಕ್ಲೀನ್ ಚಿಟ್

ಈಗಷ್ಟೇ ಸಿಬಿಐ ಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಪಡೆದಿರುವ ಹಿರಿಯ ಐಎಎಸ್ ಅಧಿಕಾರಿ ವೈ ಶ್ರೀಲಕ್ಷ್ಮಿ ಅವರು ಸಚಿವೆ ಸಬಿತಾ ವಿರುದ್ಧ ಮಾಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ಶ್ರೀಲಕ್ಷ್ಮಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಸ್ಪಷ್ಟವಾಗಿ ಅಂದಿನ ಗಣಿ ಇಲಾಖೆ ಸಚಿವೆ ಸಬಿತಾ ಅವರ ನಿರ್ದೇಶನದಂತೆ ಸರ್ಕಾರಿ ಆದೇಶ ಜಾರಿ ಮಾಡಿದೆ. ಓಎಂಸಿಗೆ ಲೈಸನ್ಸ್ ನೀಡುವುದರಲ್ಲಿ ನನ್ನ ಪಾತ್ರವೇನು ಇಲ್ಲ ನಾನು ಸರ್ಕಾರದ(ಅಂದಿನ ವೈಎಸ್ ರಾಜಶೇಖರ ರೆಡ್ಡಿ ಸರ್ಕಾರ) ಆಜ್ಞಾಪಾಲಕಿ ಅಷ್ಟೇ ಎಂದು ಪತ್ರದಲ್ಲಿ ಕೋರಿದ್ದರು.
ಸಿಬಿಐ ಕ್ಲೀನ್ ಚಿಟ್: ಸರ್ಕಾರ ಆದೇಶ ಪಾಲಿಸುವುದು ಐಎಎಸ್ ಅಧಿಕಾರಿಗಳ ಕರ್ತವ್ಯವಾದರೂ, GO(government Order) ತಡೆ ಹಿಡಿಯುವ ಅಧಿಕಾರವೂ ಇರುತ್ತದೆ. ಸುಮ್ಮನೆ ಸಚಿವೆ ಸಬಿತಾ ಮೇಲೆ ಆರೋಪಗಳನ್ನು ದೂಡುವ ಯತ್ನವನ್ನು ಶ್ರೀಲಕ್ಷ್ಮಿ ಮಾಡುತ್ತಿದ್ದಾರೆ ಎಂದು ಸಿಬಿಐ ಪರ ವಕೀಲರು ವಾದಿಸಿದರು.
ಸಿಬಿಐ ವಕೀಲರ ವಾದವನ್ನು ಮನ್ನಿಸಿದ ಕೋರ್ಟ್, ಸಬಿತಾಗೆ ಗುರುವಾರ(ಡಿ.1) ಕ್ಲೀನ್ ಚಿಟ್ ನೀಡಿತ್ತು. ಜಾಮೀನು ತೀರ್ಪು ಕಾಯ್ದಿರಿಸಲಾಗಿತ್ತು. ಶುಕ್ರವಾರ ಶ್ರೀಲಕ್ಷ್ಮಿಗೆ ಜಾಮೀನು ಮಂಜೂರಾಗಿದೆ.












Click it and Unblock the Notifications