ಲೈಂಗಿಕ ಕಿರುಕುಳ: ಇಬ್ಬರು ಬಿಪಿಒ ಟೆಕ್ಕಿಗಳು ಮನೆಗೆ

ನಾಲ್ವರು ಯುವತಿಯರು (ಟ್ರೈನಿ) ತಮ್ಮ ಬಾಸ್ (ಅಸಿಸ್ಟೆಂಟ್ ಮ್ಯಾನೇಜರ್) ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಆ ಅಧಿಕಾರಿಯನ್ನು ಮನೆಗೆ ಕಳಿಸಲಾಗಿದೆ. ಜತೆಗೆ, ಪ್ರಕರಣದ ಬಗ್ಗೆ ಮಾಹಿತಿಯಿದ್ದರೂ ಸಹಾಯಕ ಅಧಿಕಾರಿ ಮ್ಯಾನೇಜ್ ಮಂಟ್ ಗಮನಕ್ಕೆ ತರದೇ ಇದ್ದುದಕ್ಕೆ ಆತನನ್ನೂ ಕೆಲಸದಿಂದ ವಜಾ ಮಾಡಲಾಗಿದೆ.
ಜಿಬಿಎಸ್ ಕಾಲ್ ಸೆಂಟರಿನ 28 ವರ್ಷದ ಆಲ್ಫಿ ಚೌಗ್ ಪ್ರಕರಣದ ಪ್ರಮುಖ ಆರೋಪಿ. ಈತ ದೂರು ನೀಡಿರುವ ನಾಲ್ವರು ಮಹಿಳಾ ಉದ್ಯೋಗಿಗಳಿಗೆ ಅಶ್ಲೀಲ ಎಸ್ಎಂಎಸ್ ಕಳಿಸುವುದು ಮತ್ತು ಅವರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವುದನ್ನು ಮಾಡುತ್ತಿದ್ದ. ಈತ ಉದ್ಯೋಗದಲ್ಲಿ ಈ ಯುವತಿಯರನ್ನು ಮೇಲ್ದರ್ಜೆಗೆ ಎತ್ತುವುದಾಗಿ ಆಮಿಷವೊಡ್ಡುತ್ತಿದ್ದ ಎಂದು ಕಂಪನಿಯ ಆಡಳಿತಾಧಿಕಾರಿ ಮನಪ್ರೀತ್ ಸಿಂಗ್ ಹೇಳಿದ್ದಾರೆ.
ವಿಷಯವನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದೂ ಆಲ್ಫಿ ಚೌಗ್ ಬೆದರಿಸುತ್ತಿದ್ದ. ಇವನಿಗೆ ನೆರವು ನೀಡಿದ ಮತ್ತೊಬ್ಬ ಅಸಿಸ್ಟೆಂಟ್ ಮ್ಯಾನೇಜರ್ ದೀಪಕ್ ಕುಮಾರ್ ನನ್ನು ಸಹ ಕೆಲಸದಿಂದ ತೆಗದುಹಾಕಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಈ ಮಹಿಳಾ ಉದ್ಯೋಗಿಗಳು ಪಂಜಾಬ್ ಮತ್ತು ಡಾರ್ಜಿಲಿಂಗಿನವರಾಗಿದ್ದು, ದಕ್ಷಿಣ ದಿಲ್ಲಿಯ ಮಾಳ್ವಿಯಾ ನಗರ ಮತ್ತು ಹರ್ಯಾಣಾದ ಫರೀದಾಬಾದ್ ಜಿಲ್ಲೆಯಲ್ಲಿ ವಾಸವಾಗಿದ್ದಾರೆ.











Click it and Unblock the Notifications