ಅಣ್ಣಾ ಹಜಾರೆ TIME ಪತ್ರಿಕೆಯ ವರ್ಷದ ವ್ಯಕ್ತಿ?

global-thinker-anna-on-time-magazine
ಪೂನಾ, ಡಿ.1: ಭ್ರಷ್ಟಾಚಾರ ವಿರೋಧಿ ಹಿರಿಯಣ್ಣ ಹಜಾರೆ ಅವರ 'ಟೈಂ' ಚೆನ್ನಾಗಿದೆ. ನಿನ್ನೆಯಷ್ಟೇ ಜಗತ್ತಿನ 100 ಮಂದಿ ಉನ್ನತ ಚಿಂತಕರಲ್ಲಿ ಒಬ್ಬರು ಎನಿಸಿಕೊಂಡಿದ್ದೂ ಅಲ್ಲದೆ ಇದೀಗ ಅಂತಾರಾಷ್ಟ್ರೀಯ ಪ್ರತಿಷ್ಠಿತ TIME ಮುಖಪುಟದಲ್ಲಿ ರಾರಾಜಿಸಲಿದ್ದಾರೆ.

ಪತ್ರಿಕೆಯ ಫೋಟೋಗ್ರಾಫರುಗಳು ಅಣ್ಣಾ ಅವರ ಹುಟ್ಟೂರಾದ ರಾಳೇಗಣ ಸಿದ್ಧಿಗೆ ಕಳೆದ ವಾರ ಭೇಟಿ ನೀಡಿ, ಒಂದೇ ಸಮನೆ ಅಣ್ಣಾರ ಫೋಟೋಗಳನ್ನು ತೆಗೆದಿದ್ದಾರೆ. ಇದರಿಂದ ಟೈಂ ಪತ್ರಿಕೆಯ ಮುಂದಿನ ಸಂಚಿಕೆಯ ಅಣ್ಣಾ ಕಾಣಿಸಿಕೊಳ್ಳುವುದು ಖಚಿತವಾಗಿದೆ.

ಆಣ್ಣಾ ಯಾವೆಲ್ಲ ವೇಷದಲ್ಲಿ ಪೋಸ್ ನೀಡಿದರು!?: 'ಟೈಂ' ಫೋಟೋಗ್ರಾಫರುಗಳಿಗೆ ಆಣ್ಣಾ ಯಾವೆಲ್ಲ ವೇಷದಲ್ಲಿ ಪೋಸ್ ನೀಡಿದರು ಎಂಬ ಕುತೂಹಲದ ಪ್ರಶ್ನೆಗೆ ಎಂದಿನಂತೆ ಬಿಳಿ ಖಾದಿ ದಿರಿಸಿನಲ್ಲಿ ಸಾದಾಸೀದಾ ಅಣ್ಣಾ ಕಂಗೊಳಿಸಿದ್ದಾರೆ. ತಮ್ಮ ಅಚ್ಚುಮೆಚ್ಚಿನ ತಾಣವಾದ ರಾಳೇಗಣ ಸಿದ್ಧಿಯ ಯಾದವಬಾಬಾ ದೇವಸ್ಥಾನದಲ್ಲಿ ಅಣ್ಣಾ ಧ್ಯಾನಲೋಕದಲ್ಲಿ ಕಳೆದುಹೋದಾಗ ಪತ್ರಿಕೆಯ ಫೋಟೋಗ್ರಾಫರುಗಳ ಕ್ಲಿಕ್ ಸದ್ದು ಮಾತ್ರವೇ ಕೇಳಿ ಬಂದಿದೆ.

ಈ ಮಧ್ಯೆ, ಅಣ್ಣಾ ಅವರನ್ನು TIME ವರ್ಷದ ವ್ಯಕ್ತಿಯನ್ನಾಗಿ ಚಿತ್ರೀಕರಿಸುತ್ತದಾ ಎಂಬ ಕುತೂಹಲವೂ ಮನೆ ಮಾಡಿದೆ. ಏಕೆಂದರೆ ವರ್ಷಾಂತ್ಯದ ಹಿನ್ನೋಟದಲ್ಲಿ ಅಣ್ಣಾ ಸೇವೆಯನ್ನು ಪರಿಗಣಿಸಿದಾಗ TIME ವರ್ಷದ ವ್ಯಕ್ತಿ ಗೌರವಕ್ಕೆ ಅಣ್ಣಾ ಅರ್ಹ ವ್ಯಕ್ತಿಯಾಗಿದ್ದಾರೆ ಎಂಬುದು ಅವರ ಕಟ್ಟಾ ಅಭಿಮಾನಿಗಳ ಅನಿಸಿಕೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+