ಪರಿಸರ ಕಾಳಜಿಯ ಸಹೋದರರಿಗೆ ಹ್ಯಾಟ್ಸಾಫ್

Naman Hegde, Hegde
ಪರಿಸರಮಾಲಿನ್ಯದ ಕುರಿತು ವೇದಿಕೆಯನ್ನೇರಿ ಗಂಟೆಗಟ್ಟಲೆ ಭಾಷಣ ಬಿಗಿಯುವವರು ಬಹಳ ಮಂದಿ. ಆದರೆ, ಆಡಿದ ಮಾತನ್ನು ಕಾರ್ಯರೂಪಕ್ಕೆ ಇಳಿಸುವವರು ಬಹಳೇ ವಿರಳ. ಅಂತಹ ಇಂದಿನ ದಿನಗಳಲ್ಲಿ ಪರಿಸರ ಮಾಲಿನ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಾ, ಇತರರಿಗೂ ಮಾರ್ಗದರ್ಶಕರೆನಿಸಿರುವ ಇಬ್ಬರು ಬೆಂಗಳೂರಿನ ಯುವಕರ ಬಗ್ಗೆ ಮತ್ತು ಅವರು ಪರಿಸರ ಮಾಲಿನ್ಯದ ಬಗ್ಗೆ ವಹಿಸುತ್ತಿರುವ ಕಾಳಜಿಯನ್ನು ತಿಳಿಸುವುದೇ ಈ ಬರಹದ ಉದ್ದೇಶ.

ನಮನ್ ಎನ್.ಹೆಗ್ಡೆ, ವಯಸ್ಸು 20 : ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಎಮ್.ಎಸ್. ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏಳನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಚಿಕ್ಕಂದಿನಿಂದಲೂ ಪರಿಸರ ಮಾಲಿನ್ಯದ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತಿರುವ ಯುವಕ. ಕಾಲೇಜಿನ ಕ್ಯಾಂಪಸ್ ನಲ್ಲಿಯೇ ಇರುವ MSRIT ಹಾಸ್ಟೆಲ್ ನಲ್ಲಿ ನೆಲೆಸುತ್ತಿದ್ದು, ಕ್ಯಾಂಪಸ್ ಒಳಗಡೆ ಹಾಗೂ ಕಾಲೇಜಿಗೆ ಹೋಗುವಾಗಲೆಲ್ಲ ಸೈಕಲ್ ಉಪಯೋಗ ಮಾಡುತ್ತಿದ್ದಾರೆ.

ವಿಶೇಷವೆಂದರೆ, ಮತ್ತಿಕೆರೆಯಲ್ಲಿರುವ ಕಾಲೇಜಿನಿಂದ 22 ಕಿಲೋಮೀಟರ್ ದೂರದಲ್ಲಿರುವ ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯ HAL ಕಂಪನಿಯ ಹಿಂದುಗಡೆ ಇರುವ ಎಲ್.ಬಿ ಶಾಸ್ತ್ರಿ ನಗರದಲ್ಲಿರುವ ಮನೆಗೆ ಹದಿನೈದು ದಿನಗಳಿಗೊಮ್ಮೆ ಬಂದು ಹೋಗುವ ಈ ಯುವಕ ಸೈಕಲ್ಲನ್ನೇ ಬಳಸುತ್ತಾರೆ. ಸೈಕಲ್ ಸವಾರಿಯ ಸಂದರ್ಭ ರಸ್ತೆಯಲ್ಲಿನ ವಾಹನಗಳಿಂದ ಹೊರಸೂಸುವ ಹೊಗೆ ಮತ್ತು ರಸ್ತೆಯ ಧೂಳಿನಿಂದ ರಕ್ಷಣೆ ಪಡೆಯಲು ಮುಖ ಮುಚ್ಚುವ ಮಾಸ್ಕನ್ನು ಉಪಯೋಗಿಸುತ್ತಿದ್ದಾರೆ.

20 ವರ್ಷದ ನಮನ್ ರವರ ಆರೋಗ್ಯ ಅಥವಾ ದೈಹಿಕ ಫಿಟ್‌ನೆಸ್ ಬಗ್ಗೆ ಹೇಳುವುದಾರೆ, ಕಳೆದ ಎರಡು ವರ್ಷಗಳಿಂದ ಕಾಲೇಜಿನಲ್ಲಿ ಅಥ್ಲೇಟ್ ಚಾಂಪಿಯನ್ ಆಗಿರುವ ಇವರು, ಕಳೆದ ವರ್ಷದಲ್ಲಿ ಕಾಲೇಜಿನ ಅದ್ಭುತ ಆಟಗಾರನಾಗಿ ಮಿಂಚಿದ್ದಾರೆ. ಪ್ರಸ್ತುತ ವರ್ಷದಲ್ಲಿ ಕಾಲೇಜಿನ ಬಾಸ್ಕೆಟ್ ಬಾಲ್ ತಂಡದಲ್ಲಿ ಭಾಗವಹಿಸಿ ಯುನಿವರ್ಸಿಟಿ ಮಟ್ಟದಲ್ಲಿ ಜರುಗಿದ ಆಟದ ಸ್ಪರ್ಧೆಯಲ್ಲಿ ತಂಡ ಜಯಿಸಲು ವಿಶೇಷ ಶ್ರಮ ವಹಿಸಿದ್ದರು. ನಮನ್ ಎಂದಿಗೂ ಸ್ಕೂಟರ್ ಅಥವಾ ಕಾರಿನಂತಹ ಹೊಗೆಕಾರುತ್ತಾ ಪರಿಸರ ನಾಶಮಾಡುವ ವಾಹನಗಳ ಉಪಯೋಗವನ್ನು ಮನಸಾ ಧ್ವೇಷಿಸುತ್ತಾರೆ. [ಅಣ್ಣನಂತೆ ತಮ್ಮನೂ...]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+