ಪರಿಸರ ಕಾಳಜಿಗೆ 75 ವಯಸ್ಸಿನ ಅಜ್ಜನೇ ಸ್ಫೂರ್ತಿ
ಪ್ರಸನ್
ಎನ್.ಹೆಗ್ಡೆ,
ವಯಸ್ಸು
18
:
ಬೆಂಗಳೂರಿನ
ಲ್ಯಾಂಗ್
ಫೋರ್ಡ್
ಟೌನ್
ನ
ಸೈಂಟ್
ಜೋಸೆಫ್
ಕಾಲೇಜಿನಲ್ಲಿ
ಬಿಎಸ್ಸಿಯ
2ನೇ
ಸೆಮಿಸ್ಟರ್
ನಲ್ಲಿ
ಓದುತ್ತಿರುವ
ಚಿಗುರು
ಮೀಸೆಯ
ಯುವಕ.
ಈತ
ಕೂಡ
ಮನೆಯಿಂದ
12
ಕಿಲೋಮೀಟರ್
ದೂರದಲ್ಲಿರುವ
ಕಾಲೇಜಿಗೆ
ಹೋಗಿಬರಲು
ಸೈಕಲ್ಲನ್ನೇ
ಆಯ್ಕೆ
ಮಾಡಿಕೊಂಡಿದ್ದಾರೆ.
ಅಥ್ಲೇಟಿಕ್ಸ್
ಗೀಳು
ಅಣ್ಣನಿಂತಲೂ
ಹೆಚ್ಚು.
ಮುಂಜಾನೆ
6
ಗಂಟೆಗೇ
ಸೈಕಲ್
ನೊಂದಿಗೆ
ಮನೆಬಿಟ್ಟು
ಕಂಠೀರವ
ಸ್ಟೇಡಿಯಂ
ತಲುಪಿ
ದೈಹಿಕ
ಅಭ್ಯಾಸ
ಮುಗಿಸಿ
9
ಗಂಟೆಗೆ
ಕಾಲೇಜಿಗೆ
ಹೋದರೆ
ಸಂಜೆ
5
ಗಂಟೆಗೆ
ಮನೆಗೆ
ಬರುತ್ತಾರೆ.
ಒಂದು
ವೇಳೆ
ಎಲ್ಲಾದರೂ
ಅಗತ್ಯದ
ಕಾರ್ಯಕ್ಕಾಗಿ
ಆಟೋರಿಕ್ಷಾದಲ್ಲಿ
ಹೇಗಲೇಬೇಕಾದ
ಅನಿವಾರ್ಯತೆಯಿದ್ದಾಗ
ಪರಿಸರ
ಕಾಳಜಿಯ
ಹಸಿರುಬಣ್ಣದ
ರಿಕ್ಷಾಕ್ಕಾಗಿ
ಕಾದಾರೇ
ವಿನಃ
ಅನ್ಯ
ವಾಹನ
ಉಪಯೋಗಿಸುವುದೇ
ಇಲ್ಲ.
id="toptextpromo">
ಇವರಿಬ್ಬರ
ಧ್ಯೇಯದಿಂದಾಗಿ ಕಳೆದ ಆರೇಳು ವರ್ಷಗಳಿಂದ ದೀಪಾವಳಿ ಹಬ್ಬದ ಸಮಯ ಮನೆಯಲ್ಲಿ ಸಿಡಿಮದ್ದುಗಳ ಖರೀದಿಯಾಗಲೀ ಸಿಡಿಸುವುದಾಗಲೀ ನಿಷೇಧ. ಅಕ್ಕಪಕ್ಕದ ಮನೆಗಳಲ್ಲಿ ಪಟಾಕಿ ಸುಡುಮದ್ದುಗಳ ಭರಾಟೆ ನಡೆಯುತ್ತಿದ್ದರೆ ಇವರ ಮನೆಯಲ್ಲಿ ಅಂದು ಕೇವಲ ದೀಪದ ಸಾಲು ಮಾತ್ರ ಕಂಡುಬರುತ್ತದೆ. ಈ ಯುವಕರು ಮೂಲತಃ ಉಡುಪಿ ಜಿಲ್ಲೆಯ ಕೋಟದ ಸಮೀಪವಿರುವ ಬನ್ನಾಡಿ ಎಂಬಲ್ಲಿಯವರಾಗಿದ್ದು ನವೀನ್ ಹೆಗ್ಡೆಯವರ ಸುಪುತ್ರರು. id='are-slot-1' class='oiad oi-axt oiadv'> id='top-searched-articles'>ಈ
ಇಬ್ಬರು ಮಕ್ಕಳ ಪರಿಸರ ಕಾಳಜಿ ಮತ್ತು ದೈಹಿಕ ಆರೋಗ್ಯಕ್ಕೆ ಅವರ ತಾತ ಬನ್ನಾಡಿ ಭೋಜ ಹೆಗ್ಡೆಯವರೇ ಸ್ಫೂರ್ತಿ. ಈ ಯುವಕರ ತಾತ ಅಂದರೆ ನವೀನ್ ಹೆಗ್ಡೆಯವರ ತಂದೆ ಬನ್ನಾಡಿ ಭೋಜ ಹೆಗ್ಡೆಯವರು ಕರ್ನಾಟಕ ಸರಕಾರದ ಮೀನುಗಾರಿಕಾ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದರು. 1970ರ ದಶಕದಲ್ಲಿ ಮುಖ್ಯಮಂತ್ರಿ ದೇವರಾಜ ಅರಸರ "ಉಳುವವನೇ ಹೊಲದೊಡೆಯ" ಕಾನೂನು ಹೊರಬಂದ ಸಮಯದಲ್ಲಿ ಉದ್ಯೋಗಕ್ಕೆ ರಾಜಿನಾಮೆಯಿತ್ತು ತನ್ನ ಪೂರ್ವಜರಿಂದ ಬಂದಿರುವ ಜಮೀನಿನ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ವಯಸ್ಸು 75 ದಾಟಿದ್ದರೂ, ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡಿಕೊಂಡು ಬಂದಿದ್ದಾರೆ.











Click it and Unblock the Notifications