6 ಲಕ್ಷ ಏರ್ ಟೆಲ್ ಷೇರು ಖರೀದಿಸಿದ ಭಾರ್ತಿ ಟೆಲಿಕಾಂ

3.71 ಕೋಟಿ ಮೌಲ್ಯದ 98,000 ಷೇರುಗಳನ್ನು ಖರೀದಿಸಿ ಷೇರುಗಳ ಸಂಖ್ಯೆಯನ್ನು ಶೇ. 45.58 ರಿಂದ ಶೇ. 45.59 ಹೆಚ್ಚಿಸಿಕೊಳ್ಳಲಾಗಿದೆ.
ಹಾಗೂ 19 ಕೋಟಿ ಮೌಲ್ಯದ 5,02,000 ಷೇರುಗಳನ್ನು ಖರೀದಿಸಿ ಷೇರುಗಳ ಸಂಖ್ಯೆಯನ್ನು ಶೇ. 45.59 ರಿಂದ ಶೇ. 45.60 ಹೆಚ್ಚಿಸಿಕೊಳ್ಳಲಾಗಿದೆ ಎಂದು ಬಿಎಸ್ ಇ ಹಾಗೂ ಎನ್ ಎಸ್ ಇಗೆ ನೀಡಿರುವ ದಾಖಲೆಗಳು ಹೇಳುತ್ತಿದೆ.
ಮುಕ್ತ ಮಾರುಕಟ್ಟೆಯಲ್ಲಿ ಸುಮಾರು 54.51 ಕೋಟಿ ಮೌಲ್ಯದ 14.93 ಲಕ್ಷ ಷೇರುಗಳನ್ನು ಕಳೆದ ವಾರ ಖರೀದಿಸಿದ್ದ ಭಾರ್ತಿ ಏರ್ ಟೆಲ್ ಮತ್ತೆ ಷೇರುಗಳ ಖರೀದಿಗೆ ಮುಂದಾಗಿದೆ.
ಸಂಸ್ಥೆ ಇಬ್ಬರು ಹಿರಿಯ ಅಧಿಕಾರಿಗಳು ಸುಮಾರು 4.60 ಕೋಟಿ ಮೌಲ್ಯದ 1.15 ಲಕ್ಷ ಷೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಿಟ್ಟಿದ್ದರು. ಕಳೆದ ಸೆಪ್ಟೆಂಬರ್ ತ್ರೈಮಾಸಿಕದ ಪ್ರಕಾರ ಭಾರ್ತಿ ಏರ್ ಟೆಲ್ ನಲ್ಲಿ ಶೇ. 45.54 ರಷ್ಟು ಪಾಲನ್ನು ಭಾರ್ತಿ ಟೆಲಿಕಾಂ ಹೊಂದಿದೆ. ಈ ಷೇರುಗಳ ಖರೀದಿಯ ರಹಸ್ಯ ಕಂಪನಿ ಮೇಲಿನ ಹಿಡಿತ ಪಡೆಯಲು ಕೈಗೊಂಡ ಕ್ರಮ ಎಂದು ನಂಬಲಾಗಿದೆ.












Click it and Unblock the Notifications