ರಿವಾಲ್ವರ್ ಹೊಂದಿದ್ದ ಹೈಸ್ಕೂಲ್ ವಿದ್ಯಾರ್ಥಿ ಕಿಟಕಿಯಿಂದ ಹಾರಿ ಪರಾರಿ
ಗಾಜಿಯಾಬಾದ್,
ನ. 27: ಉತ್ತರ ಪ್ರದೇಶದ ಪಂಚಶೀಲನಗರ ಜಿಲ್ಲೆಯಲ್ಲಿ 10 ತರಗತಿಯ ವಿದ್ಯಾರ್ಥಿಯೊಬ್ಬನ ಚೀಲದಲ್ಲಿ ಗುಂಡು ತುಂಬಿದ್ದ ರಿವಾಲ್ವರ್ ಪತ್ತೆಯಾಗಿದೆ. ಆದರೆ ಸದರಿ ವಿದ್ಯಾರ್ಥಿ ಕಿಟಕಿಯಿಂದ ಹಾರಿ ಪರಾರಿಯಾಗಿದ್ದಾನೆ. id="toptextpromo">'ಸದರಿ
ವಿದ್ಯಾರ್ಥಿಯ ಸ್ಕೂಲ್ ಬ್ಯಾಗಿನಲ್ಲಿ ರಿವಾಲ್ವರ್ ಇದೆ ಎಂದು ಸಹಪಾಠಿಯೊಬ್ಬ ಶಿಕ್ಷಕ ಬ್ರಿಜ್ ಪಾಲ್ ಗೆ ಮಾಹಿತಿ ನೀಡಿದ. ತಕ್ಷಣ ಅವರು ಪರಿಶೀಲನೆ ನಡೆಸಿ ದರು. ಆಗ ಬಾಲಕನ ಚೀಲದಲ್ಲಿ ರಿವಾಲ್ವರ್ ಪತ್ತೆಯಾಯಿತು' ಎಂದು ಆರ್ ಕೆಎಸ್ ಇಂಟರ್ ಕಾಲೇಜ್‌ನ ಪ್ರಿನ್ಸಿಪಾಲ್ ಖೇಹರ್ ಸಿಂಗ್ ತಿಳಿಸಿದ್ದಾರೆ. ವಿಷಯಕ್ಕೆ ಸಂಬಂಧಿಸಿ ದೂರು ದಾಖಲಿಸಲಾಗಿದೆ. ವಿದ್ಯಾರ್ಥಿಯನ್ನು ಶಾಲೆಯಿಂದ ಅಮಾನತು ಗೊಳಿಸಲಾಗುವುದು ಎಂದು ಪ್ರಿನ್ಸಿಪಾಲ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರಿವಾಲ್ವರ್
ಪರವಾನಿಗೆ
ಯಾರದು?:
ವಿದ್ಯಾರ್ಥಿಯ
ತಂದೆಯ
ಹೆಸರಿನಲ್ಲಿ
ಪರವಾನಿಗೆ
ಹೊಂದಿದ್ದ
ರಿವಾಲ್ವರ್
ಅನ್ನು
ವಶಪಡಿಸಿಕೊಳ್ಳಲಾಗಿದೆ
ಮತ್ತು
ಅದನ್ನು
ಮುಟ್ಟುಗೋಲು
ಹಾಕಲಾಗಿದೆ
ಎಂದು
ಪೊಲೀಸರು
ಹೇಳಿದ್ದಾರೆ.
ಬಾಲಕನನ್ನು
ಶಾಲೆಯ
ಪ್ರಿನ್ಸಿಪಾಲ್
ಕಚೇರಿಗೆ
ಕರೆದೊಯ್ಯಲಾಗಿತ್ತು.
ಅಲ್ಲಿಂದ
ಬಾಲಕ
ಕಿಟಕಿಯಿಂದ
ಹಾರಿ
ಪರಾರಿಯಾಗಿದ್ದಾನೆ
ಎಂದು
ಹೇಳಲಾಗಿದೆ.












Click it and Unblock the Notifications