ವರನ ಸೋದರಿಯ ಮೇಲೆ ವಧು ಸೋದರನಿಂದ ಅತ್ಯಾಚಾರ
ಜೈಪುರ,
ನ. 27: ಮದುವೆಯ ದಿನ ನವೆಂಬರ್ 23ರಂದು ವರನ ಸೋದರಿಯ ಮೇಲೆ ವಧುವಿನ ಸೋದರ ಅತ್ಯಾಚಾರವೆಸಗಿದ ಕಾರಣ ವರನ ಕಡೆಯವರು ಮದುವೆಯನ್ನು ರದ್ದುಪಡಿಸಿದ್ದಾರೆ. id="toptextpromo">ಇಲ್ಲಿನ
ನೀಮ್ ಚನಾ ಗ್ರಾಮದಲ್ಲಿ ಮದುವೆಯ ರಾತ್ರಿ ವರನ ಸೋದರಿ ಬಹಿರ್ದೆಸೆಗಾಗಿ ಹೊಲದ ಕಡೆ ಹೋದಾಗ ವಧುವಿನ ಸೋದರ ಗನ್ ತೋರಿಸಿ, ಆ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಯುವತಿಯ ಆಕ್ರಂದನ, ಚೀರಾಟ ಕೇಳಿ ಮದುವೆಗೆ ಬಂದಿದ್ದವರು ಹೊಲದತ್ತ ಓಡಿದಾಗ ಈ ವಿಷಯ ಗೊತ್ತಾಗಿದೆ. id='are-slot-1' class='oiad oi-axt oiadv'> id='top-searched-articles'>ಯುವತಿ
ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರೆ ವಧುವಿನ ಸೋದರ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾನೆ. ವೈದ್ಯಕೀಯ ವರದಿಗಳ ಪ್ರಕಾರ ಯುವತಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಘಟನೆಯ ಬಳಿಕ ಮದುವೆಯನ್ನು ರದ್ದುಪಡಿಸಿದ ವರ, ತಮ್ಮ ಕುಟುಂಬದವರೊಂದಿಗೆ ಹಳ್ಳಿಯಿಂದ ವಾಪಸಾಗಿದ್ದಾರೆ.











Click it and Unblock the Notifications