ಕಾಂಗ್ರೆಸ್ ಲಿಂಗಾಯಿತ ಮುಖಂಡರು ಮಾನಸಿಕ ಅಸ್ವಸ್ಥರು

ಯಡಿಯೂರಪ್ಪನವರು ಜನ ಮೆಚ್ಚಿದ ನಾಯಕ. ಕಾಂಗ್ರೆಸ್ ಪಕ್ಷಕ್ಕೆ ಅವರ ಬಗ್ಗೆ ಹಗುರವಾಗಿ ಮಾತನಾಡುವ ಯೋಗ್ಯತೆಯಿಲ್ಲ. ಅವರು ಮಾಡಿದ ಜನಪರ ಕೆಲಸ ಕಾಂಗ್ರೆಸ್ ಪಕ್ಷದ ಯಾವ ನಾಯಕರೂ ಈ ವರೆಗೂ ಮಾಡಿಲ್ಲ. ಇನ್ನಾದರೂ ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಕಾಂಗ್ರೆಸ್ ಪಕ್ಷದ ಲಿಂಗಾಯಿತ ಮುಖಂಡರು ನಿಲ್ಲಿಸಲಿ ಎಂದು ರೇಣುಕಾಚಾರ್ಯ ಕಿವಿಮಾತು ಹೇಳಿದ್ದಾರೆ.
ನಾವು ಮಠಗಳಿಗೆ ಅನುದಾನ ನೀಡಿದ್ದಕ್ಕಾಗಿ ಸ್ವಾಮೀಜಿಗಳು ನಮ್ಮನ್ನು ಹೊಗಳುತ್ತಿದ್ದಾರೆನ್ನುವ ಭಾವನೆ ತಪ್ಪು. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರದೂ ಬರೀ ವೋಟ್ ಬ್ಯಾಂಕ್ ಪಾಲಿಟಿಕ್ಸ್. ಅಹಿಂದ ಮತ್ತು ಕುರುಬ ಸಮುದಾಯಕ್ಕೆ ಅವರು ನೀಡಿದ ಕೊಡುಗೆಯಾದರೂ ಏನು ಎಂದು ರೇಣುಕಾಚಾರ್ಯ ಪ್ರಶ್ತ್ನಿಸಿದ್ದಾರೆ.
ಯಡಿಯೂರಪ್ಪನವರು ವೀರಶೈವ ಸಮಾಜಕ್ಕೆ ಸೀಮಿತರಾದವರಲ್ಲ. ಪಕ್ಷ ಕೂಡ ಅವರನ್ನು ಆರೀತಿ ಬಿಂಬಿಸಲಿಲ್ಲ, ಆದರೆ ಆ ಸಮಾಜ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡರೆ ತಪ್ಪೇನು ಎಂದು ರೇಣುಕಾಚಾರ್ಯ ಕೇಳಿಕೆ ನೀಡಿದ್ದಾರೆ.












Click it and Unblock the Notifications