ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮುಲು ವಿರುದ್ದ ಮತ್ತೊಂದು ಅಸ್ತ್ರ:4 ಶಾಸಕರು ಸಸ್ಪೆಂಡ್

|
Google Oneindia Kannada News

BJP, Karnataka
ಬಳ್ಳಾರಿ, ನ 26: ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಜಿಲ್ಲೆಯ ನಾಲ್ಕು ಶಾಸಕರನ್ನು ಬಿಜೆಪಿ ಅಮಾನತು ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಸ್ವಾಭಿಮಾನಿ ಶ್ರೀರಾಮುಲುವಿಗೆ ಭರ್ಜರಿ ಟಾಂಗ್ ನೀಡಿದೆ. ಇಬ್ಬರು ಸಂಸದರನ್ನು ಅಮಾನತುಗೊಳಿಸಿದ ಬೆನ್ನಲ್ಲೇ ಪಕ್ಷ ಈ ನಿರ್ಧಾರ ಕೈಗೊಂಡಿದೆ.

ಶಾಸಕರುಗಳಾದ ಜಿ.ಸೋಮಶೇಖರ ರೆಡ್ಡಿ, ಬಿ.ನಾಗೇಂದ್ರ, ಟಿ ಎಚ್ ಸುರೇಶ್ ಬಾಬು ಮತ್ತು ವಿಧಾನಪರಿಷತ್ ಮೃತ್ಯುಂಜಯಯರವರು ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸದೇ ಪಕ್ಷೇತರ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು ರಾಜ್ಯ ಬಿಜೆಪಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿತ್ತು. ಎಲ್ಲಾ ನಾಲ್ಕು ಶಾಸಕರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿ ಶನಿವಾರ (ನ 26) ಉತ್ತರ ನೀಡುವಂತೆ ಈ ಹಿಂದೆ ರಾಜ್ಯಾಧ್ಯಕ್ಷ ಈಶ್ವರಪ್ಪ ಆದೇಶ ನೀಡಿದ್ದರು. ಆದರೆ ಅವರ ಉತ್ತರಕ್ಕೆ ಕಾಯದೆ ಬಿಜೆಪಿ ಈ ಕಠಿಣ ನಿರ್ಧಾರ ತೆಗೆದು ಕೊಂಡಿದೆ.

ದೆಹಲಿಯಲ್ಲಿ ವರಿಷ್ಠರು ಸಂಸದರ ಮೇಲೆ ವಿರುದ್ದ ಕತ್ತಿ ಬೀಸಿದ ಬೆನ್ನಲ್ಲೇ ಬಿಜೆಪಿ ರಾಜ್ಯ ಘಟಕ ಈ ನಿರ್ಧಾರ ಕೈಗೊಂಡಿದೆ. ಪಕ್ಷದ ಎಲ್ಲಾ ಸೌಲಭ್ಯ, ಸಹಕಾರ, ಅಧಿಕಾರವನ್ನು ಪಡೆದು ಪಕ್ಷದ ಅಧಿಕೃತ ಅಭ್ಯರ್ಥಿ ಪರ ನಿಲ್ಲದೆ ಶ್ರೀರಾಮುಲು ಪರ ಪ್ರಚಾರ ಮಾಡಿ ಪಕ್ಷಕ್ಕೆ ನಂಬಿಕೆ ದ್ರೋಹದ ಕೆಲಸ ಮಾಡಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.

ಪಕ್ಷದ ಅಮಾನತಿನ ನಿರ್ಧಾರ ಇನ್ನೂ ಕೈ ಸೇರಿಲ್ಲ. ಅದು ಬಂದ ಮೇಲೆ ಉತ್ತರ ನೀಡುತ್ತೇವೆ, ಏನೇ ಆಗಲಿ ನಾವು ಶ್ರೀರಾಮುಲು ಪರ ಪ್ರಚಾರ ಮುಂದುವರಿಸುತ್ತೇವೆ. ಬಳ್ಳಾರಿಯಲ್ಲಿ ಶ್ರೀರಾಮುಲು ಜಯ ಖಂಡಿತ ಎಂದು ಅಮಾನಿತಿಗೆ ಒಳಗಾದ ಸಂಸದರು ಮತ್ತು ಶಾಸಕರು ಜಂಟಿ ಹೇಳಿಕೆ ನೀಡಿದ್ದಾರೆ.

English summary
BJP suspended Four MLA from the party. Somasekhar Reddy, Nagendra, Suresh Babu and Mrutyunjaya suspended from the party for the anti party activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X