ನ.26ರಂದು ಟ್ರಾಫಿಕ್ ಮಾಮಾಗಳಿಗೊಂದು ಥ್ಯಾಂಕ್ಸ್
ಬೆಂಗಳೂರು,
ನ. 24 : ಗಾಳಿ, ಮಳೆ, ಬಿಸಿಲಿರಲಿ, ವಾಹನದಟ್ಟಣೆಯಲ್ಲಿ ಸಿಲುಕಿಕೊಂಡಿರುವ ವಾಹನಗಳು ಎಷ್ಟೇ ಹೊಗೆಯುಗುಳುತ್ತಿರಲಿ, ಮನೆಯಲ್ಲಿ ಹಬ್ಬವಿರಲಿ ಹರಿದಿನವಿರಲಿ, ಜ್ವರವಿರಲಿ ಕೆಮ್ಮಿರಲಿ, ರಿಟೈರ್ ಆಗುವವರೆಗೆ ರಸ್ತೆಯಲ್ಲೇ ಹೆಚ್ಚಿನ ಜೀವನ ಕಳೆಯುವ ಟ್ರಾಫಿಕ್ ಪೊಲೀಸ್ ಮಾಮಾಗಳಿಗೊಂದು ಥ್ಯಾಂಕ್ಸ್ ಹೇಳುವುದು ಬೇಡವೆ? id="toptextpromo">ಖಂಡಿತ
ಹೇಳಲೇಬೇಕು ಅನ್ನುತ್ತಾರೆ ಬೆಂಗಳೂರಿನ ಶಾಲಾ ಮಕ್ಕಳು. Children"s Movement for Civil Awareness (CMCA) ಎಂಬ ಸಂಸ್ಥೆ ನವೆಂಬರ್ 26ರ, ಶನಿವಾರ 'ಟ್ರಾಫಿಕ್ ಪೊಲೀಸ್ ದಿನ' ಬೆಂಗಳೂರಿನ ಟ್ರಾಫಿಕ್ ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಶಿವಾಜಿನಗರದ
ಹೆಚ್ಚುವರಿ ಕಮಿಷನರ್ ಕಚೇರಿಯೆದಿರು CMCAದ ಸದಸ್ಯರಾಗಿರುವ 75 ಶಾಲೆಗಳ ಮಕ್ಕಳು ನ.26ರಿಂದ ಒಂದು ವಾರ ಟ್ರಾಫಿಕ್ ಪೊಲೀಸರಿಗೆ ಧನ್ಯವಾದಗಳನ್ನು ಹೇಳಲಿದ್ದಾರೆ. CMCA ಸತತ 7ನೇ ವರ್ಷ ಟ್ರಾಫಿಕ್ ಪೊಲೀಸ್ ದಿನವನ್ನು ಆಚರಿಸುತ್ತಿದೆ.











Click it and Unblock the Notifications