ಜ್ಯುಬಿಲಿ ಹಿಲ್ಸಿನಲ್ಲಿ ಜಿಮ್ ಮಾಡಿ ಅಸುನೀಗಿದ ಸಾಫ್ಟ್ ವೇರ್ ಇಂಜಿನಿಯರ್
ಹೈದರಾಬಾದ್,
ನ 23: ಇಪ್ಪತ್ತಾರು ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಇಲ್ಲಿನ ಜ್ಯುಬಿಲಿ ಹಿಲ್ಸಿನಲ್ಲಿ ಜಿಮ್ ಮಾಡುತ್ತಿದ್ದಾಗಲೇ ನಿಗೂಢ ರೀತಿಯಲ್ಲಿ ಮಂಗಳವಾರ ಸಾವಿಗೀಡಾಗಿದ್ದಾರೆ. ಮೃತರನ್ನು ಕರೀಂನಗರದ ಬಿ. ರಾಜು ಎಂದು ಗುರುತಿಸಲಾಗಿದ್ದು, ಇವರು ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದರು. id="toptextpromo">ಜ್ಯುಬಿಲಿ
ಹಿಲ್ಸ್ ಪೊಲೀಸರ ಪ್ರಕಾರ ರಾಜು ಮಂಗಳವಾರ ಬೆಳಗ್ಗೆ 7.30ರಲ್ಲಿ ಜಿಮ್ ಮಾಡಲು ಬಂದಿದ್ದಾರೆ. ಅಲ್ಲಿ ಕಠಿಣ ವ್ಯಾಯಾಮ ಮಾಡಿದ ನಂತರ ತಮ್ಮ ಫ್ಲಾಟಿಗೆ ಮರಳಿದ್ದಾರೆ. ಬಂದವರೇ ವಿಪರೀತ ಬೆನ್ನು ನೋವು ಎಂದು ಗೋಳಾಡಿದ್ದಾರೆ. ಆಗ ಅವರ ರೂಂ ಮೇಟ್ ಒಬ್ಬರು ನೋವು ನಿವಾರಕ ಗುಳಿಗೆಯನ್ನು ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗುಳಿಗೆ
ನುಂಗುತ್ತಿದ್ದಂತೆ ರಾಜು ವಾಂತಿ ಮಾಡಿಕೊಳ್ಳತೊಡಗಿದರು. ಸ್ವಲ್ಪ ಹೊತ್ತಿನಲ್ಲೇ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಹೊತ್ತುಕೊಂಡು ಹೋಗಲಾಯಿತಾದರೂ ಆ ವೇಳೆಗೆ ರಾಜು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಜ್ಯುಬಿಲಿ ಹಿಲ್ಸ್ ಸಬ್‌ಇನ್ಸ್‌ಪೆಕ್ಟರ್ ಕೆ. ಸಯ್ಯದ್ದುಲ್ಲಾ ತಿಳಿಸಿದ್ದಾರೆ.











Click it and Unblock the Notifications