ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಡಿಕಲ್ ವಿದ್ಯಾರ್ಥಿನಿ ಗ್ಯಾಂಗ್ ರೇಪ್, ಇಬ್ಬರ ಸೆರೆ

By Mahesh
|
Google Oneindia Kannada News

Medical Student gangraped
ನವದೆಹಲಿ, ನ.23: 29 ವರ್ಷದ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಹಣ ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಫೋರ್ಟಿಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿ ನೀಡಿದ ಹೇಳಿಕೆ ಪ್ರಕಾರ, ವೈದ್ಯಕೀಯ ಸಲಕರಣೆ ಖರೀದಿಸಲು ಮಾರುಕಟ್ಟೆಗೆ ತೆರಳಿದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.

ಒಂಟಿಯಾಗಿ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ತಡೆದು ನಿಲ್ಲಿಸಿದ ಬೈಕ್ ಸವಾರರು, ಅಡ್ರೆಸ್ ಮಿಸ್ ಆಗಿದೆ ದಾರಿ ತೋರಿಸುವಂತೆ ಕೇಳಿದ್ದಾರೆ.

ಈ ಸಂದರ್ಭದಲ್ಲಿ ಆಕೆಯ ಮೂಗಿಗೆ ಹ್ಯಾಂಡ್ ಕರ್ಚೀಫ್ ಹಿಡಿದು ಪ್ರಜ್ಞೆ ತಪ್ಪಿಸಲಾಗಿದೆ. ಸುಮಾರು ಎರಡು ಗಂಟೆ ನಂತರ ಆಕೆಗೆ ಪ್ರಜ್ಞೆ ಬಂದಾಗ ಶಾಕ್ ಆಗಿದೆ.

ಆಕೆ ಮೈಮೇಲೆ ಒಂದು ನೂಲು ಬಟ್ಟೆ ಕೂಡಾ ಇರಲಿಲ್ಲ. ಇಬ್ಬರು ಸಾಮೂಹಿಕ ಅತ್ಯಾಚಾರ ಎಸೆಗಿ, ಮದ್ಯ ಕುಡಿಯುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಾರೆ. ಚಾಕು ಹಿಡಿದು ಕೊಂಡು ಪ್ರಾಣ ತೆಗೆಯುವುದಾಗಿ ಬೆದರಿಕೆ ಒಡ್ಡಿ ತಮ್ಮ ದೇಹದ ಬಯಕೆಯನ್ನು ತೀರಿಸಿಕೊಂಡಿದ್ದಾರೆ.

ಇದು ಸಾಲದೆಂಬಂತೆ ಆಕೆಯನ್ನು ಕಾರಿನಲ್ಲಿ ದೂರಕ್ಕೆ ಕರೆದೊಯ್ದು ಚಲಿಸುವ ಕಾರಿನಲ್ಲೇ ಮತ್ತೊಮ್ಮೆ ರೇಪ್ ಮಾಡಲಾಗಿದೆ.

ಹೀಗೆ ಈ ಕರಾಳ ಪ್ರಕ್ರಿಯೆ ಎರಡು ದಿನ ಮುಂದುವರೆದ ಮೇಲೆ ಆಕೆ ಕಾರಿನಿಂದ ಹಾರಿ ಹೇಗೋ ತಪ್ಪಿಸಿಕೊಂಡು ಬಂದಿದ್ದಾಳೆ. ಬರುವ ಮುನ್ನ ಕಾರಿನ ಲೈಸನ್ಸ್ ಪ್ಲೇಟ್ ನಂಬರ್ ನೋಟ್ ಮಾಡಿಕೊಂಡು ಬಂದಿದ್ದಾಳೆ. ಇದರಿಂದ ದುಷ್ಕರ್ಮಿಗಳನ್ನು ಹಿಡಿಯಲು ಸಹಾಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.

English summary
Two people were arrested after they gangraped a 29-year-old medical student and robbed her in a moving car, said the police.According to the FIR, the victim had gone buy some medical equipment in the market on her way back home and was pursuing a course from Fortis Hospital, New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X