ಪಿಇಎಸ್ ಐಟಿ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಸೂಸೈಡ್

Posted By:
Subscribe to Oneindia Kannada
PESIT student commits suicide
ಬೆಂಗಳೂರು, ನ.22: 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಣವ್ ತನ್ನ ಕಾಲೇಜು ಹಾಸ್ಟೆಲ್ ರೂಮ್ ನಲ್ಲಿ ನೇಣಿಗೆ ಶರಣಾಗಿದ್ದಾನೆ. ಪ್ರಣವ್ ಸಾವು ಕಂಡು ದುಃಖತಪ್ತರಾದ ಅಪಾರ ವಿದ್ಯಾರ್ಥಿ ಸಮೂಹ ಪಿಇಎಸ್ ಇಂಜಿನಿಯರಿಂಗ್ ಟೆಕ್ನಾಲಜಿ ಕಾಲೇಜಿಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಮೃತನನ್ನು ಬಿಹಾರ ಮೂಲದ ಪ್ರಣವ್ ಎಂದು ಗುರುತಿಸಲಾಗಿದ್ದು, ನೇಣುಬಿಗಿದುಕೊಂಡು ಪ್ರಾಣಬಿಟ್ಟಿದ್ದಾನೆ. ಪಿಇಎಸ್ ಐಟಿಯಲ್ಲಿ ಎರಡನೇ ಸೆಮಿಸ್ಟರ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಮೃತನ ರೂಮ್ ನಲ್ಲಿ ಯಾವುದೇ ಡೆತ್ ನೋಟ್ ಕಂಡು ಬಂದಿಲ್ಲ. ಪ್ರಣವ್ ಗೆ ಯಾರೂ ರೂಮ್ ಮೇಟ್ ಸಹ ಇರಲಿಲ್ಲ. ಆದರೆ, ಆತನ ಸಹಪಾಠಿಗಳ ಪ್ರಕಾರ ಇತ್ತೀಚೆಗೆ ನಡೆದ ಆಂತರಿಕ ಪರೀಕ್ಷೆಯಲ್ಲಿ ಪ್ರಣವ್ ಫೇಲ್ ಆಗಿದ್ದ ಎಂದು ತಿಳಿದು ಬಂದಿದೆ.

ಓದಿನಲ್ಲಿ ಕೊಂಚ ಹಿಂದಿದ್ದ ಪ್ರಣವ್ ನನ್ನು ಪ್ರಾಧ್ಯಾಪಕರು ಇತ್ತೀಚೆಗೆ ಎಲ್ಲರೆದುರು ಹೀಯಾಳಿಸಿ ಬೈದಿದ್ದರು. ಇದರಿಂದ ಆತ ತೀವ್ರವಾಗಿ ಮನನೊಂದಿದ್ದ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಘಟನೆ ಬಗ್ಗೆ ತಿಳಿದ ನಂತರ ಸ್ಥಳಕ್ಕೆ ಆಗಮಿಸಿದ ಗಿರಿನಗರ ಪೊಲೀಸರು, ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಮನವೊಲಿಸುವ ಯತ್ನ ನಡೆಸುತ್ತಿದ್ದರು.

ಆದರೆ, ಆಂತರಿಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳನ್ನು ಕಾಡುವ ಚಟ ಪ್ರಾಧ್ಯಾಪಕರಿಗೆ ಇದೆ. ಕಾಲೇಜಿನ ಪ್ರಿನ್ಸಿಪಾಲ್ ಕೂಡಾ ಈ ಸಾವಿಗೆ ಕಾರಣರಾಗುತ್ತಾರೆ ಎಂದು ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಮುಂದುವರೆಸಿದರು.

ಮೃತನ ಪೋಷಕರಿಗೆ ವಿಷಯ ಮುಟ್ಟಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದು, ಕಾಲೇಜು ಮ್ಯಾನೇಜ್ ಮೆಂಟ್ ನ ಪ್ರಮುಖರನ್ನು ಪ್ರಶ್ನಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 20 year-old engineering student named Pranav, a Native of Bihar has committed suicide in PES institute of Technology college hostel in Bangalore. Student Pranav got less marks in internal assignment exam held recently and committed suicide by hanged in his college hostel room in Girinagar Police station limits.
Please Wait while comments are loading...