ಬ್ಲಾಗಿನಲ್ಲಿ ತನ್ನದೇ ನಗ್ನ ಚಿತ್ರ ಹಾಕಿ ಯುವತಿಯ ಪ್ರತಿಭಟನೆ

ಈಜಿಪ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೆಂಬುದು ಇವಳ ಅಳಲು. ಅದಕ್ಕಾಗಿ ಈ ದಾರಿ ಕಂಡುಕೊಂಡಿದ್ದಾಳೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಂದರೆ ಸಾಮಾಜಿಕ ತಾಣವೊಂದರಲ್ಲಿ ನಗ್ನ ಚಿತ್ರಗಳನ್ನು ಹಾಕಿ ಪ್ರತಿಭಟಿಸುವುದೇ ಎಂದು ಈಜಿಪ್ಟಿನ ಎಲ್ಲ ವರ್ಗದ ಜನ ಈ ಯುವತಿಯ ವಿರುದ್ಧ ಎದ್ದುಕೂತಿದ್ದಾರೆ.
ಅಲಿಯಾ ಮಾಗ್ಡಾ ಎಲ್ಮಾಡಿ ಹೆಸರಿನ ಈ ಯುವತಿ ಮೊನ್ನೆ ಇಂತಹ ಕುಚೇಷ್ಟೆ ಮಾಡಿ. ಸಂಪ್ರದಾಯವಾದಿಗಳು, ವಿಚಾರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
'ನಾಡಿನಲ್ಲಿ ವಿಜೃಂಭಿಸುತ್ತಿರುವ ಹಿಂಸಾಚಾರ, ಮತಿಹೀನ ಜನಾಂಗೀಯ ವ್ಯವಸ್ಥೆ, ಕಾಮ, ಲೈಂಗಿಕ ಕಿರುಕುಳ ಮತ್ತು ಆಷಾಢಭೂತಿತನದ' ವಿರುದ್ಧ ಪ್ರತಿಭಟನಾರ್ಥವಾಗಿ ತನ್ನ ಸಂಪೂರ್ಣ ನಗ್ನ ಫೋಟೋಗಳನ್ನು ಪ್ರಕಟಿಸುತ್ತಿರುವುದಾಗಿ ಯುವತಿ ಬ್ಲಾಗಿನಲ್ಲಿ ಘೋಷಿಸಿದ್ದಾಳೆ.
'ಅಭಿವ್ಯಕ್ತಿ ಸ್ವಾತಂತ್ರ್ಯ ಗಳಿಸುವುದು ಮಹಿಳೆಯರಿಗೆ ಇಷ್ಟೊಂದು ದುಬಾರಿಯೇ' ಎಂದೂ ಒಬ್ಬ ಬೆಂಬಲ ಸೂಚಿಸಿದ್ದಾನೆ.












Click it and Unblock the Notifications