ಪೋಪ್ ಕಿಸ್ಸಿಂಗ್ ಇಮಾಮ್ ಆಡ್, ವ್ಯಾಟಿಕನ್ ಕಳವಳ

Benetton Ad, Vatican worry
ವ್ಯಾಟಿಕನ್ ಸಿಟಿ, ನ.19: ಕ್ರೈಸ್ತರ ಪರಮ ಗುರು ಪೋಪ್ ಬೆನೆಡಿಕ್ಟ್ XVI ಹಾಗೂ ಈಜಿಪ್ಟಿನ ಇಮಾಮ್ ತುಟಿಗೆ ತುಟಿ ಒತ್ತಿರುವ ಚಿತ್ರ ಬಳಕೆ ಬಗ್ಗೆ ವ್ಯಾಟಿಕನ್ ಸಿಟಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಬೆನೆಟ್ಟನ್ ಕಂಪನಿ ಮಾಡಿರುವ ಈ ಪ್ರಮಾದದ ವಿರುದ್ಧ ಕಾನೂನು ಸಮರ ಸಾರುವುದಾಗಿ ಕ್ರೈಸ್ತ ಧರ್ಮ ಪ್ರತಿಷ್ಠಾನ ಹೇಳಿದೆ.

ಬೆನೆಟ್ಟನ್ ತನ್ನ ಜವಳಿ ಉದ್ಯಮಕ್ಕೆ ದಿಢೀರ್ ಎಂದು ಬೂಮ್ ಸಿಗಲಿ ಎಂದು ಇತ್ತೀಚೆಗೆ ಸಕತ್ ಟ್ರಿಕ್ ಮಾಡಿತ್ತು. ಜಗತ್ತಿನ ಪ್ರಭಾವಿ ನಾಯಕರುಗಳ ನಡುವಿನ ಚುಂಬನ ದೃಶ್ಯವನ್ನು ಬೆನೆಡಿಕ್ಟ್ ಜಾಹೀರಾತಿಗೆ ಬಳಸಿಕೊಂಡಿತ್ತು.

ಪೋಪ್ ಹಾಗೂ ಈಜಿಪ್ಟಿನ ಅಲ್ ಅಜರ್ ಮಸೀದಿಯ ಶೇಖ್ ಮಹಮ್ಮದ್ ಅಹ್ಮದ್ ಅಲ್ ತಾಯೇಬ್ ಇಬ್ಬರು ತುಟಿಗೆ ತುಟಿ ಸೇರಿಸಿರುವ ಚಿತ್ರದ ಬೃಹತ್ ಕಟೌಟ್ ಮಾಡಿ ಹಾಕಲಾಗಿತ್ತು.

ಇದೇ ರೀತಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ವೆನೆಜುವೇಲಾದ ಅಧ್ಯಕ್ಷ ಹ್ಯುಗೋ ಚಾವೆಜ್ ಹಾಗೂ ಒಬಾಮಾ ಮತ್ತು ಚೀನಾ ಅಧ್ಯಕ್ಷ ಹೂ ಜಿಂಟೊ ಚುಂಬನ ಚಿತ್ರಗಳು ಎಲ್ಲೆಡೆ ಹರಡುತ್ತಿದೆ.

ಸದ್ಯಕ್ಕೆ ಪೋಪ್ ಹಾಗೂ ಇಮಾಮ್ ಚಿತ್ರದ ಕಟೌಟ್ ತೆರವುಗೊಳಿಸಲಾಗಿದೆ. ಆದರೆ, ವ್ಯಾಟಿಕನ್ ಸಿಟಿ ಆಡಳಿತ ಮಂಡಳಿ ಮಾತ್ರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಬೆನೆಡಿಕ್ಟ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+