ಜನಾರ್ದನ ರೆಡ್ಡಿ ಲೇಔಟ್ ಗೋಲ್ ಮಾಲ್ ಏನು, ಎತ್ತ?

ನಾರಾಯಣರಾವ್ ಅವರು ಈಶ್ವರಾವ್, ಸುಬ್ಟಾರಾವ್ ಹಾಗು ತಿರುಮಲ ರೆಡ್ಡಿ ಎಂಬುವವರಿಗೆ ಈ ಭೂಮಿಯನ್ನು ಮಾರಾಟ ಮಾಡಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆದು 650 ನಿವೇಶನಗಳ ಲೇ ಔಟ್ ಮಾಡಿದ್ದರು. ಜನತೆ ಇದನ್ನು ನಂಬಿ ಲಕ್ಷಾಂತರ ರೂ. ನೀಡಿ ನಿವೇಶನಗಳನ್ನು ಖರೀದಿ ಮಾಡಿದ್ದಾರೆ.
ಆದರೆ 2009 ರಲ್ಲಿ ಇದ್ದಕ್ಕಿಂದ್ದಂತೆ ವಿವಾದ ತಲೆಯೆತ್ತಿತು. ಈ ನಿವೇಶನಗಳು ನಮಗೆ ಸಂಬಂಧಿಸಿದವು ಎಂದು ರೆಡ್ಡಿಗಳು ಏಕಾಏಕಿ ಈ ಭೂಮಿಗೆ ಕಾಂಪೌಂಡ್ ಕಟ್ಟಿದರು. ನಿವೇಶನ ಪಡೆದವರು ಪೊಲೀಸರಿಗೆ ದೂರು ನೀಡಿದ್ದರೂ ಸ್ವೀಕರಿಸಿಲ್ಲ ಎಂದು ಆರೋಪಿಸಲಾಗಿದೆ.
ಅಂದಿನ ಜಿಲ್ಲಾಧಿಕಾರಿ ಶಿವಪ್ಪ ಮತ್ತು ಎಸ್ಪಿ ಸೀಮಂತ್ ಕುಮಾರ್ ಸಿಂಗ್ ಅವರೂ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಜನಾರ್ದನ ರೆಡ್ಡಿಯವರಲ್ಲಿ ಬಗೆಹರಿಸಿಕೊಳ್ಳಿ ಎಂದಿದ್ದರು ಎನ್ನುತ್ತಾರೆ ನಿವೇಶನದಾರರು.
'ಸ್ವತಃ ಜನಾರ್ದನರೆಡ್ಡಿ ಬಳಿ ಹೋಗಿ ಕೇಳಿದರು ಅವರು ಇವು ನಮ್ಮದೇ ಎಂದರು. ಹೀಗಾಗಿ ದಾರಿ ಕಾಣದೇ ಕಂಗಾಲಾಗಿದ್ದೇವೆ. ಸದ್ಯ ಜನಾರ್ದನ ರೆಡ್ಡಿ ಜೈಲು ಸೇರಿರುವುದರಿಂದ ಮತ್ತು ಈ ಭಾಗದಲ್ಲಿ ಶ್ರೀರಾಮುಲು ಚುನಾವಣೆ ಎದುರಿಸುತ್ತಿರುವುದರಿಂದ ನಿವೇಶನ ಕಳೆದುಕೊಂಡವರೆಲ್ಲ ಒಂದಾಗಿ ನ್ಯಾಯ ಕೇಳುತ್ತಿದ್ದೇವೆ' ಎಂದು ನಿವೇಶನ ಕಳೆದುಕೊಂಡವರು ತಮ್ಮ ಅಳಲು ತೋಡಿಕೊಂಡರು.












Click it and Unblock the Notifications