ರೆಡ್ಡಿಯಿಂದ ನಟಿ ರಮ್ಯಕೃಷ್ಣ ಕುಟುಂಬದ ಭೂ ಕಬಳಿಕೆ

ಬಳ್ಳಾರಿ ನಗರದ ಹೊರ ವಲಯದಲ್ಲಿರುವ ಬೆಳಗಲ್ಲು ರಸ್ತೆಯಲ್ಲಿ ಈ ಭೂಮಿಯಿದ್ದು, ಇಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಸುಮಾರು 650 ನಿವೇಶನಗಳನ್ನು ದೌರ್ಜನ್ಯದಿಂದ ರೆಡ್ಡಿ ಸಹೋದರರು ವಶಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕುರಿತು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ನಿವೇಶನ ನಮಗೆ ಬೇಕು ಎಂದು ಒತ್ತಾಯಿಸಿ ನಿವೇಶನ ಮಾಲೀಕರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾಡಳಿತ ನಮ್ಮ ಪ್ರತಿಭಟನೆಗೆ ಸ್ಪಂದಿಸಿ ಈ ಎಲ್ಲಾ ನಿವೇಶನಗಳನ್ನೂ ರೆಡ್ಡಿ ಗುಂಪಿನಿಂದ ಮುಕ್ತಗೊಳಿಸಿ ತಮಗೆ ಹಿಂದಿರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಮೇಲೆ ನಮಗೆ ವಿಶ್ವಾಸವಿದೆ, ಅವರು ನಮ್ಮ ಮನವಿಗೆ ಕೂಡಲೇ ಸ್ಪಂದಿಸಬೇಕು, ಇಲ್ಲವಾದಲ್ಲಿ ಮುಂದಿನ ಹೋರಾಟ ನಡೆಸುತ್ತೇವೆ ಎಂದು ನಿವೇಶನ ಕಳೆದುಕೊಂಡವರು ಎಚ್ಚರಿಕೆ ನೀಡಿದರು.












Click it and Unblock the Notifications