ಡಾ.ವಿಜಯ್ ಮಲ್ಯ ಮಾಡಿರುವ ಐಡ್ಯಾ ಬಹಿರಂಗ

ಉದ್ಯಮಿ ತಂದೆ ವಿಠಲ್ ಮಲ್ಯರಿಂದ ಯುಬಿ ಸಂಸ್ಥೆ ಪಡೆದ ವಿಜಯ್, ಮುಂದೆ ಅದನ್ನು ವಿಶ್ವದ ಎರಡನೇ ಅತಿದೊಡ್ಡ ಉದ್ಯಮ ಸಂಸ್ಥೆ ಮಾಡಿದರು. ಕಿಂಗ್ ಫಿಷರ್ ದೇಶದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆ ಎಂಬುದನ್ನು ಮರೆಯುವಂತಿಲ್ಲ.
ಕ್ರಿಕೆಟ್, ಫುಟ್ಬಾಲ್, ಎಫ್ 1 ರೇಸ್, ಗಾಲ್ಫ್, ಡರ್ಬಿ ರೇಸ್ ಗಳಿಗೆ ಪ್ರಾಯೋಜಕತ್ವ ನೀಡಿರುವುದಲ್ಲದೆ, ಹಲವು ಕ್ರೀಡಾ ತಂಡಗಳನ್ನು ಕೊಂಡು ಸಲಹುತ್ತಿದ್ದಾರೆ.
ಬೆಂಗಳೂರಿನಲ್ಲಿ ಮಲ್ಯ ಆಸ್ಪತ್ರೆ, ಮಲ್ಯ ಅದಿತಿ ಇಂಟರ್ ನ್ಯಾಷನಲ್ ಶಾಲೆ, ಕುಣಿಗಲ್ ಬಳಿ ಫಾರ್ಮ್ ಹೌಸ್ ಸ್ಥಾಪಿಸಿದ್ದಾರೆ.
ಎನ್ ಡಿಟಿವಿ ಗುಡ್ ಟೈಮ್ಸ್ ವಾಹಿನಿ ಒಡೆಯನಾಗಿದ್ದಾರೆ. ಎಂಟಿವಿ ರಿಯಾಲಿಟಿ ಶೋಗಳಿಗೆ ನೀಡುವುದರಲ್ಲಿ ಮಲ್ಯ ಫಸ್ಟ್.
175,000 ಪೌಂಡ್ ಹರಾಜು ಮೊತ್ತ ನೀಡಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಖಡ್ಗ ತಂದಿದ್ದು ಇದೇ ಮಲ್ಯ. ಕರ್ನಾಟಕ ಜನತಾ ಪಕ್ಷ ಎಂಬ ಪ್ರಾದೇಶಿಕ ಪಕ್ಷ ಕಲ್ಪನೆ ಹುಟ್ಟುಹಾಕಿ ಸೋತರೂ ಕೊನೆಗೂ ರಾಜ್ಯಸಭೆ ಸೇರಿ, ಸಂಸದರಾಗಿದ್ದು ಇದೇ ಮಲ್ಯ.
ಕಿಂಗ್ ಫಿಷರ್ ಕೈ ಕೊಟ್ಟಿದ್ದೇ ಹೆಚ್ಚು: 2005ರಲ್ಲಿ ಮೊದಲ ಹಾರಾಟ ಆರಂಭಿಸಿದ ಕಿಂಗ್ ಫಿಷರ್ ನಾಗರೀಕ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದ್ದು ಸುಳ್ಳಲ್ಲ.
ಸೆಕ್ಸಿ ಏರ್ ಹೋಸ್ಟಸ್ ಗಳಿಗಾಗೇ ಹಲವು ಜನ ಇಂದಿಗೂ ಕಿಂಗ್ ಫಿಷರ್ ಬುಕ್ ಮಾಡುತ್ತಿರುವುದು ಸುಳ್ಳಲ್ಲ. ಆದೆ, ಇಲ್ಲಿವರೆಗೂ ಇಂಡಿಗೋ ಏರ್ ಲೈನ್ಸ್ ಬಿಟ್ಟರೆ ಖಾಸಗಿ ವಿಮಾನಯಾನ ಕ್ಷೇತ್ರದಲ್ಲಿ ಯಾವ ಕಂಪನಿಯೂ ಲಾಭ ಕಂಡಿಲ್ಲ.
ಇದಕ್ಕೆಲ್ಲ ಸರ್ಕಾರದ ತಿಕ್ಕಲು ನೀತಿಯೇ ಕಾರಣ ಎಂದು ಹಲವು ಸಂಸ್ಥೆಗಳು ಖಾಸಗಿಯಾಗಿ ದೂರುತ್ತಿದ್ದಾರೆ. ಆದರೆ, ಮಲ್ಯ ಮಾತ್ರ ದನಿಯೇರಿಸಿದ್ದಾರೆ.
ಮಲ್ಯ ಐಡ್ಯಾ ಇಲ್ಲಿದೆ: ಭಾರತದಲ್ಲಿ ಸದ್ಯಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶವಿಲ್ಲ. ವಿದೇಶ ವಿಮಾನಯಾನ ಸಂಸ್ಥೆಗೆ ಪ್ರೋತ್ಸಾಹವಿದ್ದರೂ ನೇರ ಬಂಡವಾಳ ಸಾಧ್ಯತೆ ಇಲ್ಲ. ಸುರಕ್ಷತೆಯ ಕಾರಣ ಒಡ್ಡುವ ಸರ್ಕಾರ ಈ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಂಡಿಲ್ಲ.
ಇದೇ ಅಂಶ ಇಟ್ಟುಕೊಂಡಿರುವ ಮಲ್ಯ ಕುಸಿಯುತ್ತಿರುವ ಖಾಸಗಿ ವಿಮಾನಯಾನ ಕ್ಷೇತ್ರ ಬಲಗೊಳ್ಳಬೇಕಾದರೆ, ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡಿ ಎಂದು ಮಲ್ಯ ಆಗ್ರಹಿಸುತ್ತಿದ್ದಾರೆ.
ವಿಮಾನಯಾನ ಕ್ಷೇತ್ರದ ಮೇಲೆ ಹೇರಿರುವ ಭಾರಿ ತೆರಿಗೆಯನ್ನು ಹಿಂಪಡೆಯುವಂತೆ ಕೂಡಾ ಮಲ್ಯ ಒತ್ತಾಯಿಸುತ್ತಿದ್ದಾರೆ. ಈ ಅಂಶಗಳಿಗೆ ಇತರೆ ಸಂಸ್ಥೆಗಳ ಬೆಂಬಲವಿದ್ದರೂ ಧೈರ್ಯವಾಗಿ ಯಾರೂ ಕೇಳುತ್ತಿಲ್ಲ.
ಆದರೆ, ಕಿಂಗ್ ಫಿಷರ್ ಪ್ರಕರಣದ ನಂತರ ಮಲ್ಯ ಪ್ಲ್ಯಾನ್ ಸಕ್ಸಸ್ ಆದ್ರೆ ಅದರ ಲಾಭ ಎಲ್ಲಾ ಸಂಸ್ಥೆಗಳಿಗೂ ಆಗುವುದಂತೂ ಸತ್ಯ.












Click it and Unblock the Notifications