ಮಧುಕರ ಶೆಟ್ಟಿ ಆರೋಪಕ್ಕೆ ಸಂತೋಷ್ ಹೆಗ್ಡೆ ತಿರುಗೇಟು

ಲೋಕಾಯುಕ್ತ ಸಂಸ್ಥೆಯಲ್ಲಿ ಆರ್ ಕೆ ದತ್ತಾ ಹಾಗೂ ಮಧುಕರ ಶೆಟ್ಟಿ ಅವರ ನಡುವೆ ವೈಮನಸ್ಯ ಇತ್ತು. ಎಡಿಜಿಪಿ ಹುದ್ದೆಗೆ ಕಿತ್ತಾಟ ನಡೆದಿತ್ತು. ಎರಡು ಸ್ಥಾನದ ಅಗತ್ಯವಿತ್ತು. ನಾನು ಶೆಟ್ಟಿ ಪರ ವಹಿಸಲಿಲ್ಲ ಎಂಬ ಕೋಪಕ್ಕೆ ಈಗ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಶೆಟ್ಟಿ ಅವರ ಸಂದರ್ಶನ ಹೇಳಿಕೆಯಿಂದ ಮನನೊಂದಿದ್ದೇನೆ ಎಂದು ಹೆಗ್ಡೆ ಅವರು ವಿಷಾದ ವ್ಯಕ್ತಪಡಿಸಿದರು.
'ಭ್ರಷ್ಟಾಚಾರ ಇಲ್ಲದ ಸಂಸ್ಥೆ ಇಲ್ಲ. ಹಾಗೂ ಲೋಕಾಯುಕ್ತ ಕೂಡಾ ಭ್ರಷ್ಟಾಚಾರದಿಂದ ಲೋಕಾಯುಕ್ತ ಸಂಸ್ಥೆಯೂ ಹೊರತಾಗಿಲ್ಲ. ನಮ್ಮಲ್ಲಿ ಕಡಿಮೆ ಭ್ರಷ್ಟರಿದ್ದಾರೆ' ಎಂಬ ಹಳೆ ಸ್ಟ್ಯಾಂಡರ್ಡ್ ಹೇಳಿಕೆಯನ್ನು ಹೆಗ್ಡೆ ಹೇಳಿದರು. ಆದರೆ, ಪ್ರಾಮಾಣಿಕ ಜಡ್ಜ್ ಗಳಿಲ್ಲ ಎಂಬ ಶೆಟ್ಟಿ ಆರೋಪವನ್ನು ಅಲ್ಲಗೆಳೆದರು.
2 ವರ್ಷ ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರು ತುಂಬಾ ತಡವಾಗಿ ಆರೋಪ ಮಾಡಿದ್ದಾರೆ. ಆರೋಪ ಬಂದ ತಕ್ಷಣ ಸಂಸ್ಥೆ ಮುಚ್ಚುವ ಅಗತ್ಯವಿಲ್ಲ. ಭ್ರಷ್ಟ ಅಧಿಕಾರಿಗಳನ್ನು ಈಗಾಗಲೇ ಹೊರಹಾಕಲಾಗಿದೆ ಎಂದು ಹೆಗ್ಡೆ ಹೇಳಿದರು.
ಲೋಕಾಯುಕ್ತ ವರದಿ ಸತ್ಯಾಂಶ, ಕ್ಯಾಬಿನೆಟ್ ಸಚಿವ ಸ್ಥಾನ ಆಸೆ ಬಗ್ಗೆ ಏನು ಹೇಳಿದರು....?











Click it and Unblock the Notifications