ಎಸ್ಸೆಂ ಕೃಷ್ಣ ಹೆಸರು ಇತ್ತು ಅಂಥಾ ಯಾರ್ರಿ ಹೇಳಿದ್ದು?

ಅಕ್ರಮ ಗಣಿಗಾರಿಕೆಯ ಬಗ್ಗೆ ಕೋರಿಕೆ ಇದ್ದಷ್ಟು ಅವಧಿ ಬಗ್ಗೆ ಮಾತ್ರ ನಾವು ವರದಿ ನೀಡಿದ್ದೇವೆ. ವರದಿ ತಯಾರಿಕೆ. ತನಿಖೆ ಸಂದರ್ಭದಲ್ಲಿ ನಮ್ಮ ಅಧಿಕಾರಿ ಯು.ವಿ, ಸಿಂಗ್ ಗೆ ಸಾಕಷ್ಟು ತೊಂದರೆಗಳನ್ನು ನೀಡದರು.
ವರದಿಯಲ್ಲಿ ಪಕ್ಷಪಾತ ಮಾಡಿಲ್ಲ. 2004ಕ್ಕೂ ಮೊದಲಿನ ವರದಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಹಾಗೂ ಸಚಿವ ವಿ.ಮುನಿಯಪ್ಪ ಅವರ ಮೇಲೆ ಆರೋಪಗಳು ಕೇಳಿ ಬಂದಿದೆ.
ಅದನ್ನು ಲೋಕಾಯುಕ್ತ ವರದಿ -1ರಲ್ಲಿ ವಿಸ್ತಾರವಾಗಿ ಪ್ರಸ್ತಾಪಿಸಲಾಗಿದೆ. 2008ರ ನಂತರ ಬಂದ ಬಿಜೆಪಿ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಪ್ರಸ್ತುತ ವರದಿಯಲ್ಲಿನ ಹುಳುಕುಗಳನ್ನು ಹುಡುಕುವಲ್ಲಿ ಕಾಲ ಕಳೆದಿರುವುದು ವಿಷಾದನೀಯ.
ಎಸ್ಸೆಂ ಕೃಷ್ಣ ಬಗ್ಗೆ ಗೊತ್ತಿಲ್ಲ: ಎಸ್ಎಂ ಕೃಷ್ಣ ಅವರು ಅಧಿಕಾರದಲ್ಲಿದ್ದಾಗ ನಾನು ದೆಹಲಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಹಾಗಾಗಿ ಕೃಷ್ಣ ಅವರ ಕಾಲದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆಗೂ ನನಗೂ ಸಂಬಂಧವಿಲ್ಲ.
ಇಷ್ಟಕ್ಕೂ ಕೃಷ್ಣ ಅವರ ಮೇಲೆ ಮಾಡಿರುವ ಆರೋಪಗಳ ಬಗ್ಗೆ ಯಾವುದೇ ಪುರಾವೆ ಸಿಕ್ಕಿಲ್ಲ. 2004ರ ಮೊದಲ ವರದಿ ತನಿಖೆ ಸಂದರ್ಭದಲ್ಲೂ ಕೃಷ್ಣ ಅವರ ಹೆಸರು ಕೇಳಿಬಂದಿಲ್ಲ ನನಗೂ ಕೃಷ್ಣಗೂ ಯಾವುದೇ ಸಂಬಂಧವಿಲ್ಲ ಎಂದು ಕೃಷ್ಣ ಅವರಿಗೆ ಹೆಗ್ಡೆ ಕ್ಲೀನ್ ಚಿಟ್ ನೀಡಿದರು.
ಬೇಜವಾಬ್ದಾರಿ ಮಾಧ್ಯಮಗಳು: ಅವರಿವರು ಮಾಡಿದ ಆರೋಪಗಳನ್ನೇ ದೊಡ್ಡದು ಮಾಡಿ, ಮನಬಂದಂತೆ ವರದಿ ಮಾಡುತ್ತಿದೆ. ಯಾವ ಯಾವ ರಾಜಕಾರಣಿಗಳ ಬೆನ್ನ ಹಿಂದೆ ಯಾವ ಮಾಧ್ಯಮ ಇದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಪರೋಕ್ಷವಾಗಿ ಬಿಎಸ್ ವೈ ಹಾಗೂ ಎಚ್ಡಿಕೆ ಅವರನ್ನು ಕುಟುಕಿದರು.











Click it and Unblock the Notifications