11.11.11 ಶುಭಕರ ಐಶ್ ಬೇಬಿಗೆ ಶಶಾಂಕನ ರಕ್ಷೆ

11.11.11ರಂದು ಭಾರತದಲ್ಲಷ್ಟೇ ಅಲ್ಲದೇ ವಿದೇಶದಲ್ಲೂ ಶುಕ್ರವಾರದಂದು ಸಾಕಷ್ಟು ಮದುವೆ ಮುಹೂರ್ತಗಳು ಫಿಕ್ಸ್ ಆಗಿದೆಯಂತೆ ಇಂಗ್ಲೆಂಡ್, ಸ್ಕಾಲೆಂಡ್ ನ ಪುಟ್ಟ ನಗರಗಳಲ್ಲಿ 11.11.11 ರಂದು 50ಕ್ಕೂ ಹೆಚ್ಚು ವಿವಾಹ ನಡೆಯಲಿದೆ ಎಂದು ಡೈಲಿ ಮೇಲ್ ವರದಿಮಾಡಿದೆ.
ಭಾರತದಲ್ಲಿ ಈ ಸಂಖ್ಯೆ ಸಾವಿರ ದಾಟುತ್ತದೆ. ಅಲ್ಲದೆ ಐಶ್ವರ್ಯಾರಂತೆ ಮಗು ಹೆರುವುದರ ಜೊತೆಗೆ 11.11.11 ರಂದು 11 ನೇ ವರ್ಷಕ್ಕೆ ಕಾಲಿರಿಸುವ ಮಕ್ಕಳ ಮೇಲೂ ಪೋಷಕರು ವಿಶೇಷ ಗಮನ ಹರಿಸಿದ್ದಾರೆ.
ಯುಕೆ, ಯುಎಸ್ ನಲ್ಲಿ ನವೆಂಬರ್ 11 ರಂದು ವಿಶೇಷ ಆಚರಣೆಗಳನ್ನು ಕಾಣಬಹುದು. ಯುಕೆಯಲ್ಲಿ Armistice Day ಆಚರಿಸಿದರೆ, ಯುಎಸ್ ನಲ್ಲಿ Veterans Day ಎಂದು ದಿನವನ್ನು ಕೊಂಡಾಡುತ್ತಾರೆ. ಮೊದಲ ವಿಶ್ವ ಸಮರ ಹುತಾತ್ಮರನ್ನು ನೆನೆಯುವ Poppy Day ಆಗಿ ಕೂಡಾ ಈ ದಿನ ಸ್ಮರಿಸಲಾಗುತ್ತದೆ.
ನವೆಂಬರ್ 11 ರಂದು ಪ್ರಪಂಚದಲ್ಲಿ ಏನಾಗುವುದೋ ಗೊತ್ತಿಲ್ಲ ಆದರೆ ನಿಮ್ಮ ಗಡಿಯಾರದಲ್ಲಿ 11.11.11 ರಂದು 11.11.11 ನೋಡಲು ಮರೆಯದಿರಿ.
'Month of Stars' ಎನ್ನಬಹುದಾದ ನವೆಂಬರ್ ತಿಂಗಳ 11ರಂದು ಸ್ವತಂತ್ರ ಹೋರಾಟಗಾರ ಅಬ್ದುಲ್ ಕಲಾಂ ಅಜಾದ್, ಕ್ರಿಕೆಟರ್ ರಾಬಿನ್ ಉತ್ತಪ್ಪ, ನಟ ಲಿಯಾನಾರ್ಡೊ ಡಿ'ಕಾರ್ಪಿಯೋ, ನಟಿ ಡೆಮಿ ಮೂರ್ ಹುಟ್ಟುಹಬ್ಬ ಆಚರಿಸಿ.












Click it and Unblock the Notifications