'ಕೊನೆಯ ಉಪ ಚುನಾವಣೆಯಲ್ಲಿ ಯಡಿಯೂರಪ್ಪಗೆ ಮೊದಲ ಸೋಲು ನಿಶ್ಚಿತ'

bsy-to-lose-last-by-election-bellary-voters
ಬೆಂಗಳೂರು, ನ. 10: ಪಾತಾಳದಿಂದ ಗಣಿಯಾಳದ ಮಾತನ್ನು ಕೇಳಿಸಿಕೊಳ್ಳುವುದಾದರೆ ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ಈ ಬಾರಿ ಯಡಿಯೂರಪ್ಪ ಜಾದೂ ನಡೆಯದು. ಅದಕ್ಕೂ ಮುನ್ನ ಇತಿಹಾಸವನ್ನು ಕೆದಕಿದಾಗ, ಆಪರೇಶನ್ ಕಮಲದ ಫಲವಾಗಿ ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷದಲ್ಲಿ ನಡೆದ ಉಪ ಚುನವಾಣೆಗಳಲ್ಲಿ ಬಿಜೆಪಿ ಯಶಸ್ಸಿನ ಶ್ರೇಯಸ್ಸು ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.

ಆದರೆ ಯಡಿಯೂರಪ್ಪ ಯಶಸ್ಸಿನ ಹಿಂದೆ ಬಳ್ಳಾರಿ ರೆಡ್ಡಿ ಸೋದರರ ದಟ್ಟ ಛಾಯೆಯಿತ್ತು. ಸಾರಥ್ಯವಷ್ಟೇ ಯಡಿಯೂರಪ್ಪನವರದಾಗಿತ್ತು. ಆದರೆ ಈ ಬಾರಿ ಈ ಸಾರಥಿಗೇ ಸಡ್ಡು ಹೊಡೆಯಲು ಬಳ್ಳಾರಿ ರೆಡ್ಡಿ ಸೋದರರು ನಿರ್ಧರಿಸಿದ್ದಾರೆ. ಶತಾಯಗತಾಯ ಗೆಲ್ಲಬೇಕೆಂದು ಯಡಿಯೂರಪ್ಪ ಗೆಲ್ಲುವ ಯತ್ನ ನಡೆಸಿದರೂ ಸೋಲು ಅವರಿಗೆ ಖಚಿತ ಎನ್ನುತ್ತಾರೆ ವಿಶ್ಲೇಷಕರು.

ಹಾಗೆ ನೋಡಿದರೆ ಭ್ರಷ್ಟಾಚಾರದ ಕೆಸರಿನ ಮಧ್ಯೆಯೂ ಯಡಿಯೂರಪ್ಪ ಕಮಲವನ್ನು ಅರಳಿಸಿದ್ದಾರೆ. ಇದಕ್ಕಾಗಿ ಅವರು ಪಕ್ಷದ ಹೈಕಮಾಂಡಿಗೇ ಸಡ್ಡು ಹೊಡೆದಿದ್ದರು. ಕೊಪ್ಪಳ ಉಪ ಚುನಾವಣೆ ಖಂಡಿತಾ ಯಡಿಯೂರಪ್ಪನವರ ಗೆಲುವೇ ಎನ್ನಬಹುದು. ಆದಾಗ್ಯೂ, ಈ ಬಾರಿ ಯಡಿಯೂರಪ್ಪ ಜಾದೂ ನಡೆಯದು.

ಜೈಲಿನಿಂದ ಬಿಡುಗಡೆಯಾಗಿ ನವ ಚೈತನ್ಯ ಪಡೆದಿರುವ ಯಡಿಯೂರಪ್ಪ ಎಷ್ಟೇ ಪ್ರಯತ್ನಿಸಿದರೂ ಈ ಉಪ ಚುನಾವಣೆಯಲ್ಲಿ ತಮ್ಮ ಕರಾಮತ್ತು ತೋರಿಸಲಾಗದು. ಒಂದು ವೇಳೆ ಯಡಿಯೂರಪ್ಪ ಗೆಲ್ಲಬೇಕಾದರೆ ದೊಡ್ಡ ಪವಾಡವೇ ನಡೆಯಬೇಕು ಎನ್ನುತ್ತಿದ್ದಾರೆ ಬಳ್ಳಾರಿ ಮಂದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+