ಬಿಜೆಪಿಗೆ ಕಟ್ಟಕಡೆಯ ಉಪ ಚುನಾವಣೆಯಲ್ಲಿ ದಂತ ಭಗ್ನ!

ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಮೂಲಕ ಶ್ರೀರಾಮುಲು ಬಿಜೆಪಿಗೆ ಬಳ್ಳಾರಿಯ ಜಾಲಿ ಮುಳ್ಳಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಹಾಲಿ ವಿಧಾನಸಭೆಗೆ ಇದು ಕೊನೆಯ ಉಪ ಚುನಾವಣೆ ಎನ್ನಬಹುದು.
110 ಶಾಸಕರ ಬಲದೊಂದಿಗೆ ಅಧಿಕಾರಕ್ಕೆ ಬರುವ ತರಾತುರಿಯಲ್ಲಿ ಉಪ ಚುನಾವಣೆಯ ಪರ್ವವನ್ನೇ ಆರಂಭಿಸಿದ್ದ ಬಿಜೆಪಿ ಇದುವರೆಗೆ ಒಂದೂ ಉಪ ಚುನಾವಣೆಯನ್ನು ಸೋತಿಲ್ಲ. ಆದರೆ ಕೊನೆಯದರಲ್ಲಿ ಅದರ ನೀತಿಯೇ (ಆಪರೇಶನ್ ಕಮಲ) ಪಕ್ಷಕ್ಕೆ ಜಾಲಿಮುಳ್ಳಾಗಲಿದೆ.
ಹಾಗೆ ನೋಡಿದರೆ ಆಪರೇಶನ್ ಕಮಲ ಸೂತ್ರದ ರೂವಾರಿಗಳೇ ಬಳ್ಳಾರಿ ರೆಡ್ಡಿ ಸೋದರರು. ಆಪರೇಶನ್ ಕಮಲದ ಅಷ್ಟೂ ಜಯಗಳು ಇವರಿಗೇ ಸಲ್ಲಬೇಕು. ಆಪರೇಶನ್ ಕಮಲದ ಫಲವಾಗಿ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿಲ್ಲವಾದರೂ ಈ ಬಾರಿಯೂ ಗೆಲುವು ರೆಡ್ಡಿ ಸೋದರರಿಗೇ ಕಟ್ಟಿಟ್ಟಬುತ್ತಿ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications