ರವಿಶಂಕರ ಗುರೂಜಿ ಭ್ರಷ್ಟಾಚಾರ ವಿರೋಧಿ ಯಾತ್ರೆ: ಕಾಂಗ್ರೆಸ್ಸಿಗೆ ನಡುಕ

ರವಿಶಂಕರ ಗುರೂಜಿ ನವೆಂಬರ್ 7ರಿಂದ 10ರವರೆಗೆ ಈ ಯಾತ್ರೆ ನಡೆಸಲಿದ್ದು ಜೌನಾಪುರ, ಸುಲ್ತಾನ್ ಪುರ, ಮಿರ್ಜಾಪುರ, ಅಮೇಠಿ, ಸೊನೆಭದ್ರಾ, ಚಂಡೌಲಿ ಮತ್ತು ಕಾನ್ಪುರಕ್ಕೆ ಭೇಟಿ ನೀಡಲಿದ್ದಾರೆ. ಗಮನಾರ್ಹವೆಂದರೆ ಇವೆಲ್ಲ ಕಾಂಗ್ರೆಸ್ ಪಾಳೆಗಾರಿಕೆ ಪ್ರದೇಶಗಳು. ಸದ್ಯದಲ್ಲೇ ಉತ್ತರ ಪ್ರದೇಶದಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆಯಲಿದ್ದು ರವಿಶಂಕರ ಗುರೂಜಿ ಯಾತ್ರೆ ಕಾಂಗ್ರೆಸ್ ಗೆ ಕಂಟಕ ಪ್ರಾಯವಾಗಲಿದೆ ಎಂದು ವ್ಯಾಖ್ಯಾನಿಸಲಾಗಿದೆ.
ಕುತೂಹಲಕಾರಿ ಸಂಗತಿಯೆಂದರೆ ರವಿಶಂಕರ ಗುರೂಜಿ ಯಾತ್ರೆಯ ಪರಿಣಾಮವನ್ನು ನಿಷ್ಫಲಗೊಳಿಸಲು ಕಾಂಗ್ರೆಸ್ ಯುವರಾಜ ನ.14 ರಿಂದಲೇ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಇದನ್ನೆಲ್ಲ ಮುಂದಾಲೋಚಿಸಿಯೇ ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್ ಇತ್ತೀಚೆಗೆ ಆರ್ಎಸ್ಎಸ್ ಜತೆ ರವಿಶಂಕರ ಗುರೂಜಿ ಸಂಬಂಧ ಕಲ್ಪಿಸಿದ್ದು!
ಬಾಬಾ ರಾಮದೇವ್ ಅವರು ಆರ್ಎಸ್ಎಸ್ ನ ಪ್ಲಾನ್ ಎ, ಅಣ್ಣಾ ಹಜಾರೆ ಆರ್ಎಸ್ಎಸ್ ಪ್ಲಾನ್ ಬಿ ಮತ್ತು ಇದೀಗ ರವಿಶಂಕರ ಗುರೂಜಿ ಪ್ಲಾನ್ ಸಿ ಎಂದು ದಿಗ್ವಿಜಯ್ ಸಿಂಗ್ ಬಣ್ಣಿಸಿದ್ದರು.












Click it and Unblock the Notifications