ಉತ್ತರ ಪ್ರದೇಶದಲ್ಲಿ ರವಿಶಂಕರ ಗುರೂಜಿ ಭ್ರಷ್ಟಾಚಾರ ವಿರೋಧಿ ಯಾತ್ರೆ
ಜೌನಾಪುರ,
ನ. 8: ಆರ್ಟ್ ಆಫ್ ಲಿವಿಂಗ್ ನ ಧಾರ್ಮಿಕ ಗುರು ಶ್ರೀ ರವಿಶಂಕರ ಗುರೂಜಿ ಅವರು ಭ್ರಷ್ಟಾಚಾರ ವಿರೋಧಿ ಯಾತ್ರೆ ಹಮ್ಮಿಕೊಂಡಿದ್ದು, ದೇಶದಲ್ಲಿ ಭ್ರಷ್ಟಾಚಾರ ಕಿತ್ತೊಗೆಯುವ ಯಾವುದೇ ಹೋರಾಟವನ್ನು ತಾವು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. id="toptextpromo">'ಜನ
ಲೋಕಪಾಲ ಮಸೂದೆ ವಿಷಯದಲ್ಲಿ ಟೀಂ ಅಣ್ಣಾಗೆ ತಮ್ಮ ಅಖಂಡ ಬೆಂಬಲ ಇದೆ' ಎಂದು ಉತ್ತರ ಪ್ರದೇಶ ರಾಜ್ಯದಾದ್ಯಂತ ತಾವು ನಡೆಸುವ ಯಾತ್ರೆಗೆ ಸೋಮವಾರ ಚಾಲನೆ ನೀಡುತ್ತಾ ಹೇಳಿದರು. id='are-slot-1' class='oiad oi-axt oiadv'> id='top-searched-articles'>ತಮ್ಮ
ಯಾತ್ರೆ ರಾಜಕೀಯ ಪ್ರೇರಿತವಲ್ಲ. ಭ್ರಷ್ಟಾಚಾರದ ವಿರುದ್ಧ ಆಂದೋಲನ ಮತ್ತು ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಜತೆಗೆ, ಕೀಟನಾಶಕ ಬಳಕೆ ತ್ಯಜಿಸುವುದು, ಹೆಣ್ಣು ಶಿಶು ಹತ್ಯೆ ನಿಲ್ಲಿಸುವುದು ಮತ್ತು ಜಾತಿರಹಿತ ಸಮಾಜ ಸ್ಥಾಪನೆಗೆ ಇಂಬು ನೀಡುವುದು ಯಾತ್ರೆಯ ಗುರಿಯಾಗಿದೆ ಎಂದು ಅವರು ಪ್ರಕಟಿಸಿದರು.











Click it and Unblock the Notifications