ವೈದ್ಯಕೀಯ ವಿದ್ಯಾರ್ಥಿ ಜೋಡಿಯಿಂದ ಆಸ್ಪತ್ರೆ ಕಾರಿಡಾರಿನಲ್ಲಿ ಸೆಕ್ಸ್

'ದ್ವಿತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಸೆಕ್ಸ್ ನಲ್ಲಿ ತೊಡಗಿದ್ದು ನರ್ಸ್ ಗಮನಕ್ಕೆ ಬಂದಿದೆ. ಇದನ್ನು ಕಂಡು ಆಘಾತಗೊಂಡ ಆಕೆ ಸೆಕ್ಯುರಿಟಿಯವರನ್ನು ಕರೆಯುವ ವೇಳೆಗೆ ಇಬ್ಬರೂ ಹಾರಿಹೋಗಿದ್ದಾರೆ' ಎಂದು ಸೌಥಾಂಪ್ಟನ್ ವಿಶ್ವವಿದ್ಯಾಲಯದ ಅಸೋಸಿಯೇಟ್ ಡೀನ್ ಡಾ. ಕ್ರಿಸ್ ಸ್ಟೀಫನ್ಸ್ ತಿಳಿಸಿದ್ದಾರೆ.
'ಘಟನೆಯಿಂದ ಪ್ರತಿಷ್ಠಿತ ವಿವಿಗೆ ಕಳಂಕ ಬಂದಂತಾಗಿದೆ. ಸೆಕ್ಸ್ ನಲ್ಲಿ ತೊಡಗಿದ್ದ ಜೋಡಿ ಯಾರು ಎಂಬುದು ಸಿಸಿಟಿವಿ ಮೂಲಕ ಪತ್ತೆಯಾಗಿದೆ. ಆದರೆ ಅವರ ಹೆಸರನ್ನು ಬಹಿರಂಗಪಡಿಸಲು ನಮಗೆ ಇಷ್ಟವಿಲ್ಲ. ಆದರೆ ಇದೇ ಕೊನೆ. ಇನ್ನೆಂದು ಇಂತಹ ಪ್ರಕರಣಗಳು ನಡೆಯಬಾರದು' ಎಂದು ಇ ಮೇಲ್ ಮೂಲಕ ಸಮಸ್ತ ವಿದ್ಯಾರ್ಥಿ ವೃಂದಕ್ಕೆ ಡೀನ್ ಡಾ. ಕ್ರಿಸ್ ಸ್ಟೀಫನ್ಸ್ ಅರಿಕೆ ಮಾಡಿಕೊಂಡಿದ್ದಾರೆ.
'ಇದರ ಹೊರತಾಗಿಯೂ ನೀವುಗಳು ಸೆಕ್ಸ್ ಮಾಡಲೇಬೇಕು ಎಂದು ಇಚ್ಛಿಸಿದಲ್ಲಿ ಹೊರಗೆಲ್ಲಾದರೂ ಮಾಡಿಕೊಳ್ಳಿ. ಆದರೆ ಖಂಡಿತ ಕಾಲೇಜಿನ ಕಾರಿಡಾರಿನಲ್ಲಿ ಇಂತಹ ಅಸಭ್ಯ ವರ್ತನೆಗಳನ್ನು ನಿಲ್ಲಿಸಿ' ಎಂದು ವಿದ್ಯಾರ್ಥಿಗಳಲ್ಲಿ ಅವರು ಅಲವತ್ತುಕೊಂಡಿದ್ದಾರೆ.












Click it and Unblock the Notifications