ಇಟ್ಸ್ ಫೈನಲ್ : ಪಕ್ಷೇತರ ಅಭ್ಯರ್ಥಿಯಾಗಿ ರಾಮುಲು ಕಣಕ್ಕೆ

ಸಂಜೆ 7 ಗಂಟೆ ನಂತರ ಬಳ್ಳಾರಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ಸಭೆ ನಡೆಸಿದ ನಂತರ ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ.
ಯಡಿಯೂರಪ್ಪಗೆ ಜಾಮೀನು ಸಿಕ್ಕಿರುವುದರ ಬಗ್ಗೆ ಯಾವುದೇ ಉತ್ತರ ನೀಡಲು ನಿರಾಕರಿಸಿದ್ದಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ. ಶ್ರೀರಾಮುಲುಗೆ ಟಿಕೆಟ್ ನೀಡದಂತೆ ಬಿಜೆಪಿ ವರಿಷ್ಠರಿಗೆ ಜೈಲಿನಲ್ಲೇ ಕೂತೇ ಯಡಿಯೂರಪ್ಪ ನೀಡಿದ್ದ ನಿರ್ದೇಶನವೇ ಇದಕ್ಕೆ ಕಾರಣ.
ಈಗ ಕಣದಲ್ಲಿ ರೆಡ್ಡಿ ಬಳಗದ ವಿರುದ್ಧ ಬಿಜೆಪಿ ಪ್ಲಸ್ ಯಡಿಯೂರಪ್ಪ ಬಣ ಜಿದ್ದಾಜಿದ್ದಿನ ಹೋರಾಟ ನಡೆಸಲಿದೆ. ವಾಲ್ಮೀಕಿ ಜನಾಂಗದ ಬೆಂಬಲ ಹೊಂದಿರುವ ಶ್ರೀರಾಮುಲು ಜನಪ್ರಿಯತೆಯನ್ನು ಮುಟ್ಟಬಲ್ಲ ಮತ್ತೊಬ್ಬ ನಾಯಕರನ್ನು ಬಿಜೆಪಿ ಇರಲಿ ಪ್ರತಿಪಕ್ಷಗಳು ಸಹ ಹುಡುಕುವುದು ಕಷ್ಟವಾಗಿರುವುದರಿಂದ ರೆಡ್ಡಿ ಬಳಗಕ್ಕೆ ಈ ಬಾರಿ ಹಾದಿ ಸುಗುಮವಾಗಲಿದೆ.
ಶ್ರೀರಾಮುಲು ನಿರ್ಧಾರದ ಸುಳಿವು ಸಿಕ್ಕ ಸದಾನಂದ ಗರಂ ಆಗಿ ಹೇಳಿದ್ದು ಏನು..?












Click it and Unblock the Notifications