ಬಳ್ಳಾರಿ: ಶ್ರೀರಾಮುಲು vs ಬಿಜೆಪಿ vs ಯಡಿಯೂರಪ್ಪ

Sriramulu vs BJP
ಬೆಂಗಳೂರು, ನ.8: ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಶ್ರೀರಾಮುಲು ಸ್ಪರ್ಧೆ ಬಗ್ಗೆ ಘೋಷಣೆಯಾದ ನಂತರ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದೆ.

ಶ್ರೀರಾಮುಲು ನಿರ್ಣಯದ ಬಿಸಿ ದೆಹಲಿಗೂ ಮುಟ್ಟಿದ್ದು, ದೆಹಲಿಯಲ್ಲಿರು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ತಮ್ಮ ತಕ್ಷಣದ ಪ್ರತಿಕ್ರಿಯೆ ನೀಡಿ ಗರಂ ಆಗಿದ್ದಾರೆ.

'ನಾವು ಕೈ ಕಟ್ಟಿ ಕೂರುವುದಿಲ್ಲ. ಬಿಜೆಪಿಯಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ. ಶ್ರೀರಾಮುಲು ಅವರಿಗೆ ಮೊದಲ ಆದತ್ಯೆ ನೀಡಲಾಗಿತ್ತು. ಆದರೆ ಅವರು ಅದಕ್ಕೆ ಒಪ್ಪದಿದ್ದರೆ ನಾವು ಪರ್ಯಾಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗುತ್ತದೆ' ಎಂದು ಸದಾನಂದ ಗೌಡರು ಹೇಳಿದ್ದಾರೆ.

ಮಂಗಳವಾರ ರಾತ್ರಿ ಬಿಜೆಪಿ ಮುಖಂಡರು ದೆಹಲಿಯಲ್ಲಿ ಹಾಗೂ ಬೆಂಗಳೂರಿನಲ್ಲಿ ಸಭೆ ನಡೆಸಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವ ಸಾಧ್ಯತೆಯಿದೆ. ನಾಗೇಂದ್ರ ಅವರ ಹೆಸರು ಮುಂಚೂಣಿಯಲ್ಲಿದ್ದು ನಾಲ್ಕಾರು ಅಭ್ಯರ್ಥಿಗಳ ಹೆಸರು ಓಡಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರ ನೇತೃತ್ವದಲ್ಲಿ ಅಭ್ಯರ್ಥಿ ಘೋಷಿಸುವ ಸಾಧ್ಯತೆಯಿದೆ.

ಎಲ್ಲವೂ ಯಡಿಯೂರಪ್ಪ ತಂತ್ರ: ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಈಶ್ವರಪ್ಪ ಈಗ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಶ್ರೀರಾಮುಲುಗೆ ಬಿಜೆಪಿ ಟಿಕೆಟ್ ನಿರಾಕರಿಸುವುದು ಈ ಮೂಲಕ ರೆಡ್ಡಿಗಳ ಮುಂದೆ ಈಶ್ವರಪ್ಪ, ಸದಾನಂದ ಗೌಡರನ್ನು ವಿಲನ್ ಎಂದು ಬಿಂಬಿಸುವುದು.

ಅತ್ತ ರೆಡ್ಡಿಗಳ ಪ್ರಾಬಲ್ಯ ಮುರಿಯುವುದು ಈ ಮೂಲಕ ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ತಮ್ಮ ಅಧಿಪತ್ಯ ಸ್ಥಾಪಿಸುವುದು ಯಡಿಯೂರಪ್ಪ ಅವರ ತಂತ್ರ. ಸದ್ಯಕ್ಕೆ ಎಲ್ಲವೂ ಯಡಿಯೂರಪ್ಪ ಅವರು ಅಂದುಕೊಂಡಂತೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+