ಸಹದ್ಯೋಗಿ ರೇಪ್ ಮಾಡಿ ಎಂಎಂಎಸ್ ಹಂಚಿದವ ಬಲೆಗೆ

ಕಂಪನಿ ಅವಳಿಗೆ ಬಾಕಿ ಮೊತ್ತ ಎಂದು 40,000 ರೂ ನೀಡಿತ್ತು. ಅದೇ ಖುಷಿಯಲ್ಲಿ ಅವಳು ಎಲ್ಲಾ ಸಹದ್ಯೋಗಿಗಳಿಗೂ ಪಾರ್ಟಿ ಕೊಡಿಸಿದಳು. ಅದರೆ, ಆರೋಪಿ ಆ ಪಾರ್ಟಿಗೆ ಬಂದಿರಲಿಲ್ಲ.
ಚಕನ್ ನ ಖಾಸಗಿ ಸಂಸ್ಥೆಯ ಉದ್ಯೋಗಿಗಳಾಗಿದ್ದ ಇಬ್ಬರ ನಡುವೆ ಯಾವುದೇ ಅನೈತಿಕ ಸಂಬಂಧವಿರಲಿಲ್ಲ. ಆದರೆ, ಆರೋಪಿ ಮಾತ್ರ ವಿವಾಹಿತ ಸಹದ್ಯೋಗಿಯ ಮೇಲೆ ಕಾಮದೃಷ್ಟಿ ಬೀರಿದ್ದ.
ನನಗೆ ಬೇರೆ ಪಾರ್ಟಿ ಕೊಡಿಸು ಎಂದು ಪೀಡಿಸತೊಡಗಿದ. ಅವನ ಕಾಟ ತಡೆಯಲಾಗದೆ, ವಡಿಕಾನ್ ನ ರೆಸ್ಟೋರೆಂಟ್ ನಲ್ಲಿ ಅವನಿಗೆ ಟ್ರೀಟ್ ಕೊಡಿಸಿದಳು.
ಮುಂದಿನದು ದುರಂತ: ಆದರೆ, ಅಲ್ಲಿ ನಡೆದಿದ್ದೆ ಬೇರೆ, ಕೈಯಲ್ಲಿ ಆಯುಧ ಹಿಡಿದ ಆರೋಪಿ ಆಕೆಯನ್ನು ಹೆದರಿಸುತ್ತಾ ಆಕೆಯನ್ನು ಲಾಡ್ಜ್ ನಲ್ಲಿ ದೂಡಿ ಅತ್ಯಾಚಾರ ಎಸೆಗಿ, ವಿಡಿಯೋ ಚಿತ್ರೀಕರಣ ಮಾಡಿಟ್ಟುಕೊಂಡ. ಯಾರಿಗಾದರೂ ಹೇಳಿದರೆ ಎಂಎಂಎಸ್ ಹಂಚುವುದಾಗಿ ಬೆದರಿಕೆ ಹಾಕಿದ.
ಅವನ ಬೆದರಿಕೆಗೆ ಹೆದರಿದ ಆಕೆ ತನ್ನ ಪಾಡಿಗೆ ತಾನಿದ್ದು, ಕಚೇರಿಗೆ ಎಂದಿನಂತೆ ಹಾಜರಾದಳು.ಆದರೆ, ಅವನು ಆಗಲೇ ಕಚೇರಿಯಲ್ಲಿ ಎಂಎಂಎಸ್ ವೈರಸ್ ಹಬ್ಬಿಸಿದ್ದ. ವಿಧಿಯಿಲ್ಲದೆ ಆಕೆ ತನ್ನ ಪತಿಯನ್ನು ಕರೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದಳು.
ಆರೋಪಿ ಬೆದರಿಕೆ ಕರೆ ಜೊತೆಗೆ 11 ಸಾವಿರ ರೂ ನೀಡುವಂತೆ ಪೀಡಿಸಿದ್ದ ಕಾಲ್ ರೆಕಾರ್ಡ್ ಪಡೆದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಲ್ಲಿರಿಸಿದ್ದೇವೆ ಎಂದು ಠಾಣಾಧಿಕಾರಿ ಸುಹಾಸ್ ಹೇಳಿದ್ದಾರೆ.












Click it and Unblock the Notifications