ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಗಿ ಯುರೇನಿಯಂ ಪ್ರದೇಶಕ್ಕೆ ರಾಜೂಗೌಡ ಭೇಟಿ

By * ಸಾಗರ ದೇಸಾಯಿ, ಯಾದಗಿರಿ
|
Google Oneindia Kannada News

Sharanappa Darshanapur and Raju Gowda
ಯಾದಗಿರಿ, ನ. 5 : ಯುರೇನಿಯಂ ಗಣಿಗಾರಿಕೆ ಭೀತಿಯಿಂದ ತತ್ತರಿಸಿರುವ ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ಗೋಗಿ ಗ್ರಾಮಕ್ಕೆ ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜೂಗೌಡ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.

ಸುಮಾರು 250 ಮೀಟರ್ ಅಳದ ಬಾವಿಯೊಳಗೆ ತಾವೇ ಸ್ವತಃ ಇಳಿದು ಯುರೇನಿಯಂ ನಿಕ್ಷೇಪದ ಸ್ಥಳದಲ್ಲಿ ಪರಿಶೀಲಿಸಿ ಮಾಹಿತಿ ಪಡೆದರು. ಗಣಿಗಾರಿಕೆ ವಿಕಿರಣ 30ರಿಂದ 40 ಕಿ.ಮೀ. ದೂರದವರೆಗೆ ಹರಡಬಹುದು. ಒಂದು ಟನ್ ಹೊರತೆಗೆದಾಗ ಕೇವಲ ಒಂದು ಪಾಯಿಂಟ್ ಯುರೇನಿಯಂ ಸಿಗುತ್ತದೆ. ಅದರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಲಾಗುವುದು ಎಂದು ಗೌಡ ತಿಳಿಸಿದರು.

ಕುಡಿಯುವ ನೀರಿನ ಕೆರೆಗಳಿಗೆ ಯುರೇನಿಯಂ ತ್ಯಾಜ್ಯ ಹರಿದುಬರುತ್ತಿರುವ ಬಗ್ಗೆ ಗ್ರಾಮಸ್ಥರು ಗಮನ ಸೆಳೆದಾಗ, ಜನರ ಜೀವಕ್ಕಿಂತ ಯುರೇನಿಯಂ ಗಣಿಗಾರಿಕೆ ಹೆಚ್ಚು ಬೆಲೆ ಬಾಳೊಲ್ಲ. ಗ್ರಾಮಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಕೂಡಲೇ ಶುದ್ಧೀಕರಿಸಿ ನೀರು ಪೂರೈಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶಹಾಪೂರ ಶಾಸಕ ಶರಣಬಸಪ್ಪ ದರ್ಶನಾಪೂರ್ ಸಹ ಈ ಸಂದರ್ಭದಲ್ಲಿ ಸಚಿವರ ಜೊತೆಗಿದ್ದರು. ಯುರೇನಿಯಂ ನಿಕ್ಷೇಪ ಘಟಕದ ವ್ಯವಸ್ಥಾಪಕ ಪುಣ್ಯಮೂರ್ತಿಯವರು ಸಚಿವರಿಗೆ ಮಾಹಿತಿ ನೀಡಿದರು. ಹಾಗೂ ಗ್ರಾಮದ ಜನರು ಪದಾಧಿಕಾರಿಗಳು ಭಾಗವಹಿಸಿದ್ದರು. ಪಶ್ಚಿಮ ಘಟಕದ ಅಧ್ಯಕ್ಷ ಅನಂತ ಹೆಗಡೆ ಅಶೀಶರ, ಡಾ.ಶೇಖರ ಪಾಟೀಲ, ಡಾ.ಮಧುಕವಿ ಪಾಟೀಲ ನೇತೃತ್ವದ ಮೂರು ವರದಿಗಳು ಬಂದಿವೆ.

English summary
Yadgir MLA Rajugowda visits Gogi village and inspects uranium mining area. Uranium mining has ruined the life of villages. Drinking water is contaminated. Villagers are falling ill due to radiation of uranium around the area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X