ಕೊನೆಗೂ ಭಾರತದಲ್ಲೊಂದು ವಿಕಿಪೀಡಿಯ ಕಚೇರಿ!

ನವದೆಹಲಿಯಲ್ಲಿ ಆರಂಭವಾಗಲಿರುವ ಈ ಕಚೇರಿ ಮೂಲಕ ಸ್ಥಳೀಯ ಭಾಷಿಕರನ್ನು ಆನ್ ಲೈನ್ ಜ್ಞಾನಕೋಶದತ್ತ ಸೆಳೆಯಲು ವಿಕಿಪೀಡಿಯ ಚಿಂತಿಸಿದೆ. ಅಮೆರಿಕದ ಹೊರಗೆ ಆರಂಭವಾಗುತ್ತಿರುವ ಪ್ರಪ್ರಥಮ ವಿಕಿಪೀಡಿಯ ಕಚೇರಿ ಇದಾಗಿರುವುದು ವಿಶೇಷ.
'ಜಗತ್ತಿನ ಪ್ರತಿಯೊಬ್ಬರು ತಮ್ಮದೇ ಭಾಷೆಯಲ್ಲಿ ಮುಕ್ತವಾಗಿ ಮಾಹಿತಿಯನ್ನು ಪಡೆಯುವಂತಾಗಬೇಕು. ಎರಡನೇ ಭಾಷೆ ಅಥವಾ ಬೇರೆ ಸಂಪರ್ಕ ಭಾಷೆಯಿಂದ ಜ್ಞಾನ ಪಡೆಯುವುದು ಅಸಾಧ್ಯ' ಎಂಬ ವಿಕಿಪೀಡಿಯ ಸ್ಥಾಪಕ ಜಿಮ್ಮಿ ವೇಲ್ಸ್ ಆಶಯದಂತೆ ಸ್ಥಳೀಯ ಭಾಷೆಗಳತ್ತ ವಿಕಿಪೀಡಿಯ ದಾಪುಗಾಲು ಇಟ್ಟಿದೆ.
ವಿಕಿಪೀಡಿಯ ಹತ್ತನೇ ವಾರ್ಷಿಕೋತ್ಸವವನ್ನು ಜ.15ರಂದು ಬೆಂಗಳೂರಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈಗ ಭಾರತದಲ್ಲಿ ಕಚೇರಿ ಸ್ಥಾಪಿಸುವ ಮೂಲಕ ಸುಮಾರು 20 ಭಾರತೀಯ ಭಾಷೆಗಳಲ್ಲಿ ಮಾಹಿತಿ ಹಂಚಲು ಸಿದ್ಧತೆ ನಡೆಸಿದೆ.
ಕನ್ನಡ ಸೇರಿದಂತೆ ತೆಲುಗು, ಬೆಂಗಾಲಿ, ತಮಿಳು ಹಾಗೂ ಮಲೆಯಾಳಂನಲ್ಲಿ ವಿಕಿಪೀಡಿಯ ಪುಟಗಳು ಕಾರ್ಯನಿರ್ವಹಿಸುತ್ತಿದೆ. ನ.18ರಂದು ಮುಂಬೈನಲ್ಲಿ ಪ್ರಥಮ ವಿಕಿ ಸಮಾವೇಶ ಆಯೋಜನೆಗೊಂಡಿದೆ.












Click it and Unblock the Notifications