ಸೆಕ್ಸ್ ದಂಧೆ: ಮುಂಬೈ ಪೊಲೀಸರ ಭರ್ಜರಿ ಬೇಟೆ

ಸುಮಾರು 120 ಹುಡುಗಿಯರನ್ನು ರಕ್ಷಿಸಲಾಗಿದ್ದು, 30 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಟ್ಟಾರೆ ನೂರಕ್ಕೂ ಅಧಿಕ ಮಂದಿ ಬಂಧಿಸಲಾಗಿದೆ ಎಂದು ಎಸಿಪಿ ಆನಂದ್ ಜಾಧವ್ ಮಾಹಿತಿ ನೀಡಿದ್ದಾರೆ.
ಗ್ರ್ಯಾಂಡ್ ಟ್ರಂಕ್ ರಸ್ತೆ ಪ್ರದೇಶದಲ್ಲಿ ಗುರುವಾರ ಮುಂಜಾನೆ 2.30ಕ್ಕೆ ಎಸ್ ಎಸ್ ಬ್ರ್ಯಾಂಚ್ ಹಾಗೂ ಡಿಬಿ ಮಾರ್ಗ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ನಡೆಸಿದ ಜಂಟಿ ಕಾರ್ಯಾಚರಣೆ ಫಲ ನೀಡಿದೆ.
ಕೃಷ್ಣ ಬಿಲ್ಡಿಂಗ್ ನಲ್ಲಿ ಬೀಡು ಬಿಟ್ಟಿದ್ದ ವೇಶ್ಯೆಯರು, ವಿಟರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಠಾತ್ ದಾಳಿಗೆ ಹೆದರಿದ ಮಂದಿ ಅರ್ಧಂಬರ್ಧ ಬಟ್ಟೆಯಲ್ಲೇ ಓಡಿ ಹೋಗಿದ್ದಾರೆ.
ಆದರೆ, ಸೆರೆ ಸಿಕ್ಕವರನ್ನು 30 ಜನರ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ. 120 ಅಮಾಯಕ ಹುಡುಗಿಯರನ್ನು ಅವರ ಕುಟುಂಬದೊಡನೆ ಸೇರಿಸುವ ಪ್ರಯತ್ನ ಸಾಗಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications