ಅತ್ಯಾಚಾರ ಆರೋಪ ಹೊತ್ತ ಅಸ್ಸಾಂಜ್ ಗಡಿಪಾರು

Julian Assange to be extradited from London to Sweden
ಲಂಡನ್, ನ. 2 : ಮಹಿಳೆಯೊಬ್ಬಳನ್ನು ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ ಸಿಲುಕಿರುವ ವಿಲಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ (40) ಅವರನ್ನು ಲಂಡನ್ನಿನಿಂದ ಸ್ವೀಡನ್ನಿಗೆ ಗಡಿಪಾರು ಮಾಡಿ ಯುನೈಟೆಡ್ ಕಿಂಗ್ಡಂನ ಹೈಕೋರ್ಟ್ ತೀರ್ಪು ನೀಡಿದೆ.

ಸ್ವೀಡನ್ನಿಗೆ ಅವರನ್ನು ಗಡಿಪಾರು ಮಾಡಬಾರದೆಂದು ಅಸ್ಸಾಂಜ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಆದರೆ, ಅವರು ಸುಪ್ರೀಂ ಕೋರ್ಟಿಗೆ ಈ ತೀರ್ಪನ್ನು ಪ್ರಶ್ನಿಸಿ ಅರ್ಜಿ ಗುಜರಾಯಿಸಬಹುದಾಗಿದೆ. ಅಸ್ಸಾಂಜ್ ಅವರನ್ನು ಹತ್ತುದಿನಗಳೊಳಗೆ ಗಡಿಪಾರು ಮಾಡಲಾಗುತ್ತಿದೆ.

ಮಹಿಳೆಯನ್ನು ಬಲಾತ್ಕಾರ ಮಾಡಿದ ಮತ್ತು ಮತ್ತೊಬ್ಬ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡ ಆಪಾದನೆಯನ್ನು ಜೂಲಿಯನ್ ಅಸ್ಸಾಂಜ್ ಎದುರಿಸುತ್ತಿದ್ದಾರೆ. ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವೀಡನ್ ಅಧಿಕಾರಿಗಳು ಅವರನ್ನು ವಿಚಾರಣೆ ಮಾಡಬಯಸುತ್ತಿದ್ದಾರೆ.

ತಮ್ಮ ಮೇಲೆ ಮಾಡಿರುವ ಆಪಾದನೆಗಳೆಲ್ಲ ರಾಜಕೀಯವಾಗಿ ಪ್ರೇರೇಪಿತವಾಗಿದ್ದು, ತಮ್ಮ ಸಂಸ್ಥೆ ಭ್ರಷ್ಟಾಚಾರಗಳನ್ನು ಬಯಲು ಮಾಡಿದ್ದಕ್ಕೆ ಪ್ರತಿಯಾಗಿ ಇಂಥ ಆಪಾದನೆಗಳನ್ನು ತಮ್ಮ ಮೇಲೆ ಹೊರೆಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+