ಕೃಷ್ಣಪಟ್ಟಣಂ ಬಂದರಿನ ಚರಿತ್ರೆ, ವಾಸ್ತವ, ಭವಿಷ್ಯ

ಆಂಧ್ರಪ್ರದೇಶದಲ್ಲಿ ವೈಎಸ್ ರಾಜಶೇಖರ ರೆಡ್ಡಿ ಅವರ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಕಾಲ. 'ಚೀನಾಬೂಮ್' ಆಗಿನ್ನೂ ಶುರುವಾಗಿತ್ತು. ಬಳ್ಳಾರಿ ರೆಡ್ಡಿಗಳ ಕಂಪನಿಗೆ ಅನುಕೂಲಕರವಾದ ಬಂದರು ಸ್ಥಾಪನೆಗೆ ವೈಎಸ್ ಆರ್ ಸಿದ್ಧತೆ ನಡೆಸಿದ್ದರು.
ಅಕ್ರಮ ಗಣಿಗಾರಿಕೆ ಹಾಗೂ ಅದಿರು ಸಾಗಾಣಿಕೆಗೆ ಅನಂತಪುರ, ಕಡಪ, ವಿಶಾಖಪಟ್ಟಣಂ, ಕಾಕಿನಾಡ ಬಂದರುಗಳಿಗಿಂತ ಮತ್ತೊಂದು ಹೊಸ ಜಾಗ ಸೃಷ್ಟಿಯಾಗಬೇಕಿತ್ತು. ಆ ಹುಟ್ಟಿಕೊಂಡಿದ್ದೆ 'ಕೃಷ್ಣಪಟ್ಣಂ ಬಂದರು'.
ಓಎಂಸಿಗೆ ಹೇಗೆ ಅನುಕೂಲ: ಓಎಂಸಿಯಿಂದ 500 ಕಿ.ಮೀ. ದೂರದಲ್ಲಿರುವ ವಿಶಾಖಪಟ್ಟಣಂ ಹಾಗೂ ಕಾಕಿನಾಡ ಬಂದರುಗಳಿಗೆ ಅದಿರು ಸಾಗಿಸಲು ಹೆಚ್ಚು ವೆಚ್ಚ ಹಾಗೂ ಸಮಯ ವ್ಯರ್ಥವಾಗುತ್ತಿತ್ತು.
ಹೀಗಾಗಿ ಅನಂತಪುರದಿಂದ 225 ಕಿ.ಮೀ. ದೂರದಲ್ಲಿರುವ ಕೃಷ್ಣಪಟ್ಣಂನಲ್ಲಿ ಬಂದರು ಸ್ಥಾಪಿಸಿ ನವಯುಗ್ ನಿರ್ಮಾಣ ಸಂಸ್ಥೆಗೆ ಅದರ ಜವಾಬ್ದಾರಿಯನ್ನು ಅಭಿವೃದ್ಧಿಪಡಿಸಿತು.
ಈ ಬಂದರು ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸುಲಭವಾಗಿ ಸಿಕ್ಕಿತು. ಚೆನ್ನೈನಿಂದ 180 ಕಿ.ಮೀ ದೂರದಲ್ಲಿರುವ ಈ ಬಂದರು ನೆಲ್ಲೂರು ಜಿಲ್ಲೆಯಲ್ಲಿದೆ.
ಕೃಷ್ಣದೇವರಾಯನ ಲಿಂಕ್: ವಿಜಯನಗರದ ಅರಸು ಶ್ರೀಕೃಷ್ಣದೇವರಾಯನ ಕಾಲದ ಈ ಬಂದರಿಗೆ ಸಹಜವಾಗಿ ಆತನ ಹೆಸರನ್ನೇ ಇಡಲಾಗಿದೆ. ಕಬ್ಬಿಣದ ಅದಿರು, ಇತರೆ ಲೋಹಗಳನ್ನು ಇಲ್ಲಿಂದ ವಿದೇಶಕ್ಕೆ ಸಾಗಿಸುವ ಮಾರ್ಗ ಆಗಿನ ಕಾಲದಲ್ಲೇ ಇತ್ತು. ಅದು ಮತ್ತೆ ಅಭಿನವ ಕೃಷ್ಣದೇವರಾಯ ಎಂದು ಬಿರುದಾಂಕಿತರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರ ಕೈ ಸೇರಿರುವುದು ಕಾಕತಾಳೀಯ.
60ರ ದಶಕದಲ್ಲಿ ಮರದ ಬೋಟ್ ಗಳಲ್ಲಿ ಅದಿರು ಸಾಗಾಟ ನಡೆದಿತ್ತು. 80ರ ದಶಕದ ವೇಳೆಗೆ ಸರ್ಕಾರ ಈ ಬಂದಿರಿಗೆ ಮಾನ್ಯತೆ ನೀಡಿತ್ತು. ಆದರೆ, ಮುಂದೆ ರೆಡ್ಡಿಗಳ ಅಕ್ರಮ ದಂಧೆಯ ಅಡ್ಡಾ ಆಗಿದ್ದು ಮಾತ್ರ ದುರಂತ.
ಆದರೆ ಈಗ ಇಲ್ಲಿ ಕಾರ್ಯ ನಿರ್ವಹಿಸುವ ಹಡಗು 5,000 ಟನ್/ಗಂಟೆಗೆ ಹೊರಬಲ್ಲದು. ಎರಡನೇ ಹಂತದ ಬಂದಿರನ ಕಾರ್ಯಕ್ಕೆ 4,000 ಕೋಟಿ ಸುರಿದಿರುವ ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ, ಈ ಬಂದರನ್ನು ದೇಶದ ದೊಡ್ಡ ಬಂದರಾಗಿ ಮಾರ್ಪಾಟು ಮಾಡುವ ಪಣ ತೊಟ್ಟಿದೆ. ಸಿಬಿಐ ಕೆಂಗಣ್ಣಿನಿಂದ ಬಚಾವಾದರೆ ಮಾತ್ರ ಇದು ಸಾಧ್ಯ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications