• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೃಷ್ಣದೇವರಾಯನ ಹೆಸರಿನ ಬಂದರು ಅಕ್ರಮದ ಅಡ್ಡಾ

By Mahesh
|

ವಿಶಾಖಪಟ್ಟಣ, ಅ.28: ಅಕ್ರಮ ಗಣಿಗಾರಿಕೆ ಸಂಬಂಧ ವ್ಯಾಪಕ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ತಂಡ ಗುರುವಾರದಿಂದ ಕೃಷ್ಣಪಟ್ಟಣಂ ಬಂದರಿನಲ್ಲಿ ಬೀಡು ಬಿಟ್ಟಿದೆ.

ಹೈದರಾಬಾದ್‌ನಿಂದ ಬಂದ ಸಿಬಿಐ ಜಂಟಿ ನಿರ್ದೇಶಕ ಲಕ್ಷ್ಮಿನಾರಾಯಣ ನೇತೃತ್ವದ ತನಿಖಾ ತಂಡವು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದೆ.

ಎರಡು ದಿನಗಳಿಂದ ಸುಮಾರು 20 ಮಂದಿ ಸಿಬಿಐ ತನಿಖಾ ತಂಡ ಬಂದರು ಕೇಂದ್ರದಲ್ಲಿ ಬೀಡುಬಿಟ್ಟಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದೆ. ಬೇಲೇಕೇರಿ, ಕಾರವಾರ ಬಂದರುಗಳಲ್ಲಿ ಪಡೆದ ಮಾಹಿತಿಗೂ ಇಲ್ಲಿನ ಮಾಹಿತಿಗೂ ಹೋಲಿಕೆಯಿದ್ದು, ಓಬಳಾಪುರಂ ಎಂಬ ಬೇನಾಮಿ ಕಂಪನಿಯ ರಹಸ್ಯ ಒಂದೊಂದಾಗಿ ಹೊರಬೀಳುತ್ತಿದೆ.

ಬೇನಾಮಿ ಹೆಸರುಗಳಿಂದ ಅದಿರು ಸಾಗಾಟ ಮಾಡಿರುವ ಬಗ್ಗೆ ಸ್ಪಷ್ಟ ಮಾಹಿತಿ ಈಗ ಸಿಬಿಐಗೆ ಸಿಕ್ಕಿದೆ. ಕೃಷ್ಣಪಟ್ಟಣಂ ಬಂದರು ಕೇಂದ್ರದ ಮೂಲಕ ವಿದೇಶಗಳಿಗೂ ಲಕ್ಷಾಂತರ ಮೆಟ್ರಿಕ್ ಟನ್ ಅದಿರು ಸಾಗಣೆಯಾಗಿರುವ ಬಗ್ಗೆ ಸಂತೋಷ್ ಹೆಗ್ಡೆ ಅವರು ಸಲ್ಲಿಸಿರುವ ವರದಿಯಲ್ಲೂ ಉಲ್ಲೇಖಿಸಲಾಗಿದೆ.

ಬಂದರಿನ ಮಾಲೀಕತ್ವ ಹೊಂದಿರುವ ನವಯುಗ ಸಂಸ್ಥೆಯ ನಿವೃತ್ತ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಅವರನ್ನು ವಿಚಾರಣೆಗಾಗಿ ಸಿಬಿಐ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಅನಿಲ್ ಕುಮಾರ್ ವೈಜಾಗ್ ನಲ್ಲಿ ಸಿಬಿಐ ಎಸ್ ಪಿಯಾಗಿ ಕೂಡಾ ಕೆಲ ಕಾಲ ಕರ್ತವ್ಯ ನಿರ್ವಹಿಸಿದ್ದರು ಎಂಬುದು ವಿಶೇಷ. ಉಳಿದಂತೆ ಬಂದರಿನ ಎಂಡಿ ಶಶಿಧರ್, ನಿರ್ದೇಶಕರಾದ ಕರ್ನಲ್ ಎಸ್ ಬಿ ಪುರಿ, ಸಿ ಶ್ರೀಧರ್ ಗೂ ಸಿಬಿಐ ಬಿಸಿ ಮುಟ್ಟಿಸುವ ಸಾಧ್ಯತೆಯಿದೆ.

24 ಗಂಟೆಗಳಲ್ಲಿ 6,705 ಮೆಟ್ರಿಕ್ ಟನ್ ಗಳಿಗೂ ಅಧಿಕ ರಫ್ತು ವಹಿವಾಟು ನಡೆಸಿ ದಾಖಲೆ ನಿರ್ಮಿಸಿುವ ಈ ಬಂದಿರು ವಿಜಯನಗರದ ಚಕ್ರವರ್ತಿ ಶ್ರೀಕೃಷ್ಣದೇವರಾಯನ ಕಾಲದ್ದು ಎಂದರೆ ಆಶ್ಚರ್ಯವಾಗಬಹುದು.

ಕೃಷ್ಣದೇವರಾಯನ ಬಂದರಿಗೆ ಹೇಗೆ ಆಂಧ್ರ ರೆಡ್ಡಿ ಹಾಗೂ ಬಳ್ಳಾರಿ ರೆಡ್ಡಿ ಮಸಿ ಬಳಿದರು ಮುಂದೆ ನೋಡಿ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
CBI team is likely to file fresh charge sheet against Jailbird Gali Janardhana Reddy in illegal mining and export of iron ore. CBI team is in Krishnapatnam port which is named after Karnataka Vijayanagar Emperor, Sri Krishnadevaraya is now allegedly had become private port of YS Rajashekar Reddy and Reddy Brothers for all illegal activities related to mining.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more