ಗಾಲಿ ಜನಾ ರೆಡ್ಡಿ ಮೇಲೆ ಮತ್ತೆ ಹೊಸ ಎಫ್ ಐಆರ್

ಓಬಳಾಪುರಂ ಗಣಿ ಕಂಪನಿಗೆ ಸೇರಿದ ಲಕ್ಷಾಂತರ ಮೆಟ್ರಿಕ್ ಟನ್ ಅದಿರು, ಕೃಷ್ಣಪಟ್ಟಣಂ ಬಂದರು ಮೂಲಕ ದೇಶ-ವಿದೇಶಗಳಿಗೆ ಅಕ್ರಮವಾಗಿ ರವಾನೆಯಾಗಿರ ಬಗ್ಗೆ ಸಿಬಿಐ ತನಿಖೆ ಆರಂಭವಾಗಿದೆ.
'ಗಾಲಿ ಜನಾರ್ದನ ರೆಡ್ಡಿ ಮೇಲೆ FIR ದಾಖಲಿಸಿ ದೋಷಾರೋಪಣಾ ಪಟ್ಟಿಯನ್ನು ಶೀಘ್ರದಲ್ಲೇ ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ' ಎಂದು ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿ ನಾರಾಯಣ ಹೇಳಿದ್ದಾರೆ.
ಲೋಕಾಯುಕ್ತ ವರದಿಯಲ್ಲೂ ಉಲ್ಲೇಖ : ಅದಿರು ಸಾಗಾಟ ನಿಯಮಾವಳಿಗಳನ್ನು ಉಲ್ಲಂಘಿಸಿ ಓಬಳಾಪುರಂ ಗಣಿ ಕಂಪನಿ ಕರ್ನಾಟಕದ ಬೇಲೇಕೇರಿ, ಕಾರವಾರ, ಮಂಗಳೂರು ಕೇಂದ್ರಗಳಲ್ಲಿ ಅಕ್ರಮ ಅದಿರು ಸಾಗಾಟ ಮಾಡಿದೆ.
ಇದಕ್ಕಿಂತ ಹೆಚ್ಚಿನ ಭಾಗ ಆಂಧ್ರದ ಬಂದರುಗಳಾದ ಮಚಲಿಪಟ್ಟಣಂ ಹಾಗೂ ಕೃಷ್ಣಪಟ್ಟಣಂನಿಂದ ಅದಿರು ಸಾಗಾಟ ಮಾಡಲಾಗಿದೆ ಎಂದು ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ನೀಡಿರುವ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಸುಮಾರು ಒಂದು ತಿಂಗಳ ನಂತರ ಜನಾರ್ದನರೆಡ್ಡಿ ಹಾಗೂ ಓಎಂಸಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ತನಿಖೆಗೆ ಸಹಕರಿಸಿ ಬಂದರುಗಳ ವಿವರ ನೀಡಿದ್ದಾರೆ ಎನ್ನಲಾಗಿದೆ. ಕರ್ನಾಟಕದ ಬಂದರುಗಳ ಪ್ರವಾಸ ಮುಗಿಸಿರುವ ಸಿಬಿಐ ತಂಡ ಈಗ ಕೃಷ್ಣಪಟ್ಟಣಂ ಬಂದರಿನಲ್ಲಿ ಬೀಡು ಬಿಟ್ಟಿದೆ.
ಕೃಷ್ಣಪಟ್ಟಣಂ ಎಂಬ ಕೃಷ್ಣನ ಲೆಕ್ಕ ಹೇಳುವ ಬಂದರಿನ ಕಥೆ ಓದಿ....












Click it and Unblock the Notifications