ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಯ್ಯ ಶೆಟ್ಟಿ ಕೊಟ್ಟ ಕಜ್ಜಾಯ ತಿಂದು ಕೈದಿಗಳು ಅಸ್ವಸ್ಥ

By Srinath
|
Google Oneindia Kannada News

ಬೆಂಗಳೂರು, ಅ.28: ಡಿನೋಟಿಫಿಕೇಶನ್‌ ಆರೋಪದಡಿ ಬಂಧಿತರಾಗಿರುವ ಮಾಲೂರು ಎಸ್‌. ಕೃಷ್ಣಯ್ಯ ಶೆಟ್ಟಿ ಅವರು ದೀಪಾವಳಿ ಹಬ್ಬದ ನಿಮಿತ್ತ ಬುಧವಾರವೇ ಜೈಲಿನ ಕೈದಿಗಳಿಗೆ ಸಿಹಿ ವಿತರಿಸಿದ್ದರು ಎನ್ನಲಾಗಿದೆ. ಈ ಸಿಹಿ ಸೇವಿಸಿದ ಬಳಿಕ ಕೈದಿಗಳು ಅಸ್ವಸ್ಥರಾದರು ಎಂಬ ವದಂತಿ ಹರಡಿತು. ಕೆಲ ವಿಐಪಿ ಕೈದಿಗಳೂ ಕೃಷ್ಣಯ್ಯ ಶೆಟ್ಟಿ ಕೊಟ್ಟ ಕಜ್ಜಾಯ ತಿಂದ ಕಜ್ಜಾಯ ತಿಂದರಾದರೂ ಅವರಿಗೆ ಯಾಔಉದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.

ಆದರೆ ಈ ವದಂತಿಗಳನ್ನು ಬಲವಾಗಿ ನಿರಾಕರಿಸಿರುವ ಜೈಲಿನ ಅಧಿಕಾರಿಗಳು, ಹಬ್ಬದ ಸಿಹಿ ಊಟ ಸವಿದು ಕೈದಿಗಳಿಗೆ ಆರೋಗ್ಯ ಕೆಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯಡ್ಡಿ ಗರಂ: ಘಟನೆಯಿಂದ ವಿಚಲಿತರಾದಂತೆ ಕಂಡುಬಂದ ಮತ್ತೊಬ್ಬ ವಿಐಪಿ ಕೈದಿ ಯಡಿಯೂರಪ್ಪ ಅವರು ಜೈಲಿನಲ್ಲಿ ಇಂತಹ ಘಟನೆ ನಡೆದಿರುವುದಕ್ಕೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ. ಇಂತಹ ಘಟನೆ ಮರುಕಳಿಸಿದಂತೆ ಎಚ್ಚರವಹಿಸುವಂತೆ ಯಡಿಯೂರಪ್ಪ ತಾಕೀತು ಮಾಡಿದರು.

ದೀಪಾವಳಿ ದೊಡ್ಡ ಹಬ್ಬವಾಗಿದ್ದು, ಬಹುತೇಕ ಜೈಲು ಸಿಬ್ಬಂದಿ ಹಬ್ಬದ ರಜೆ ಹಾಕಿದ್ದರಿಂದ ಇಂತಹ ಯಡವಟ್ಟು ಸಂಭವಿಸಿದೆ. ಇದ್ದ ಕೆಲವೇ ಸಿಬ್ಬಂದಿ ಅಸ್ತಸ್ಥಗೊಂಡ ಕೈದಿಗಳಿಗೆ ತುರ್ತು ಚಿಕಿತ್ಸೆ ಕಲ್ಪಿಸಲು ಪರದಾಡಿದರು ಎನ್ನಲಾಗಿದೆ.

English summary
Nearly 100 under trials fell ill on Oct 26 at Parappana Agrahara jail in Bangalore due to food poisoning after they consumed food prepared as part of Diwali festival. The jail birds complained of nausea, lose bowel and vomiting after consuming food and were immediately attended to by the doctors in the jail clinic. But it was rumoured for a while that Parappana Agrahara jail inmates fell ill because they ate sweets (Kajjaya) distributed by Krishnaiah Setty, a vip jail bird.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X