ಅನ್ನದಾನೇಶ್ವರ ಸ್ವಾಮೀಜಿ ಮಹಿಳೆ ಜತೆಗಿನ ಅಸಭ್ಯ ವರ್ತನೆಗೆ ಕಾರಣವೇನು?
ಮೈಸೂರು,
ಅ. 26: ಮೈಸೂರಿನ ಯರಗನಹಳ್ಳಿ ಅನ್ನದಾನೇಶ್ವರ ಮಠದ ಭಕ್ತರಾದ ಹನುಮಂತ ಪಾಟೀಲ ಹಾಗೂ ಅವರ ಮಡದಿ ಎರಡೂವರೆ ವರ್ಷಗಳ ಹಿಂದೆ ಬೆಳಗಾವಿಯಿಂದ ಮೈಸೂರಿಗೆ ಬಂದು ನೆಲೆಸಿದ್ದರು. ಪಾಟೀಲ್ ಸೆಕ್ಯೂರಿಟಿ ಗಾರ್ಡ್ ಆಗಿದ್ದರೆ ಅವರ ಪತ್ನಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿ ಅನ್ನದಾನೇಶ್ವರ ಮಠದ ಶ್ರೀ ಮಹಾಶಿವಲಿಂಗ ಸ್ವಾಮೀಜಿ ಅವರ ಸೇವೆಯಲ್ಲಿ ತೊಡಗಿದ್ದರು. id="toptextpromo">ಈ
ಸಂದರ್ಭದಲ್ಲೇ ಮಠದ ಸ್ವಾಮೀಜಿಯು ದಂಪತಿಯಿಂದ ಒಂದೂವರೆ ಲಕ್ಷ ರೂ. ಹಣ ಪಡೆದಿದ್ದರು. ಇದಕ್ಕೆ ಬದಲಿಯಾಗಿ ಮಠದ ಆವರಣದಲ್ಲಿ ಜಾಗ ಕಲ್ಪಿಸುವ ಮಾತು ನೀಡಿ, ಅಲ್ಲಿ ನಿರ್ಮಾಣವಾಗುತ್ತಿದ್ದ ಕಾಂಪ್ಲೆಕ್ಸ್ ನ ಉಸ್ತುವಾರಿಯನ್ನು ಪಾಟೀಲ್ ಗೇ ನೀಡುವುದಾಗಿ ಸ್ವಾಮೀಜಿ ಮಾತು ನೀಡಿದ್ದರು. id='are-slot-1' class='oiad oi-axt oiadv'> id='top-searched-articles'>ಆದರೆ
ಇದ್ಯಾವುದು ನಡೆಯದೆ ಹೋದಾಗ, ಪಾಟೀಲ್ ದಂಪತಿ ಹಣ ನೀಡುವಂತೆ ಒತ್ತಾಯಿಸಿದರು. ಈ ರೀತಿ ಹಣ ಕೇಳಲು ಹೋದಾಗಲೇ ಪಾಟೀಲರ ಮಡದಿಯ ಕೈ ಹಿಡಿದು ಎಳೆದಾಡಿದ ಸ್ವಾಮೀಜಿ ಸೀರೆಗೂ ಕೈ ಹಾಕಿದ ಎಂದು ಆರೋಪಿಸಲಾಗಿದೆ. ಜತೆಗೆ ಮಂಚ ಹಂಚಿಕೊಂಡರೇ ರಾಣಿ ಮಾಡುವೆ ಎಂದು ಸಹ ಆಕೆಯನ್ನು ಪುಸಲಾಯಿಸಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.











Click it and Unblock the Notifications