ವಂಚನೆ: ಹಣ ವಾಪಸ್ ಕೇಳಿದ ಮಹಿಳೆಯ ಸೀರೆಗೆ ಕೈ ಹಾಕಿದ ಸ್ವಾಮೀಜಿ

ತಾನು ನೀಡಿದ್ದ ಹಣ ಹಿಂದಿರುಗಿಸುವಂತೆ ಕೇಳಿದ ಕಾರಣ ಸದರಿ ಸ್ವಾಮೀಜಿಯು ಮಹಿಳೆಯ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಜತೆಗೆ ಹಣ ಪಡೆದು ದಂಪತಿಗಳಿಗೆ ವಂಚಿಸಿದ್ದಾರೆ ಎಂಬ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ. ಆದ್ದರಿಂದ ಸೆಕ್ಷನ್ 354 ರ ಅನುಸಾರ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ನಜರಬಾದ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆದರೆ ಈ ಘಟನೆ ಬಗ್ಗೆ ಸ್ವಾಮೀಜಿ ಹೇಳುವುದೇ ಬೇರೆ. ಆರೋಪಿ ಪಾಟೀಲ್ ನನಗೆ ಬಸವ ಜ್ಞಾನ ಮಂದಿರದ ಬಸವಲಿಂಗ ಸ್ವಾಮೀಜಿ ಅವರ ಮೂಲಕ ಪರಿಚಿತನಾದದ್ದು. ಈ ಹಿಂದೆ ಈತ ಮಠದಲ್ಲಿ ಹಣ ಕಳವು ಮಾಡಿದ್ದ. ಈತನೇ ಹಣ ಕದ್ದದ್ದು ಎಂಬುದು ತಿಳಿದು ಆತನಿಂದ ಹಣ ವಸೂಲಿ ಮಾಡಲಾಗಿತ್ತು.
ಈ ಹಳೇ ವೈಷಮ್ಯವನ್ನು ಇಟ್ಟುಕೊಂಡು ನನ್ನ ವಿರುದ್ಧ ಕಟ್ಟುಕಥೆ ಕಟ್ಟಿದ್ದಾರೆ ಈ ದಂಪತಿ. ನಾನು ಯಾರ ಬಳಿಯೂ ಹಣ ಪಡೆದಿಲ್ಲ. ಜತೆಗೆ ಯಾರಿಗೂ ಮನೆ ಕಟ್ಟಿಕೊಡುವುದಾಗಲಿ ಅಥವಾ ಕಾಂಪ್ಲೆಕ್ಸ್ ಉಸ್ತುವಾರಿ ವಹಿಸುತ್ತೇನೆ ಎಂದಾಗಲಿ ಹೇಳಿಲ್ಲ. ಅಸಲಿಗೆ ಇವರು ಯಾರು, ಹಿನ್ನೆಲೆ ಏನು ಎಂಬುದೇ ನನಗೆ ತಿಳಿದಿಲ್ಲ ಎಂದು ಸ್ವಾಮೀಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.












Click it and Unblock the Notifications