ಕೆಬಿಸಿ: 5 ಕೋಟಿ ಗೆದ್ದ ಬಿಹಾರದ ಯುವಕ ಸುಶೀಲ್ ಕುಮಾರ್

ಬಾಲಿವುಡ್ ಬಾದ್ ಷಾ ಅಮಿತಾಭ್ ಬಚ್ಚನ್ ಸಾರಥ್ಯದಲ್ಲಿ ಸೋನಿ ಟಿವಿ ನಡೆಸಿಕೊಡುವ ಈ ಕ್ವಿಜ್ ಕಾರ್ಯಕ್ರಮದಲ್ಲಿ 'ಕೌನ್ ಬನೇಗಾ ಕರೋಡ್ ಪತಿ'ಗೆ ಕಂಪ್ಯೂಟರ್ ಆಪರೇಟ್ ಆಗಿರುವ ಸುಶೀಲ್ ಕುಮಾರ್ ಜಾಕ್ ಪಾಟ್ ಉತ್ತರ ನೀಡಿ, ಸ್ಪರ್ಧೆಯಲ್ಲಿ ವಿಜಯೀಭವ ಆಗಿದ್ದಾರೆ.
ಇದರೊಂದಿಗೆ ಸುಶೀಲ್ ಕುಮಾರ್ ಗೆ ಈ ಬಾರಿ ದೀಪಾವಳಿ ಭರ್ಜರಿಯಾಗಿದೆ. ಏಕೆಂದರೆ ಅ. 25ರಂದು ನರಕ ಚತುರ್ದಶಿ ಹಬ್ಬದಂದು ಈ ಎಪಿಸೋಡ್ ಚಿತ್ರೀಕರಣವಾಗಿದ್ದು, ನವೆಂಬರ್ 2 ಬುಧವಾರದಂದು ಪ್ರಸಾರವಾಗಲಿದೆ.
ಜನಪ್ರಿಯ 'ಕೌನ್ ಬನೇಗಾ ಪಂಚ್ ಕೋಟಿ ಮಹಾ ಮನಿ' ಟಿವಿ ಕ್ವಿಜ್ ಕಾರ್ಯಕ್ರಮದಲ್ಲಿ ಇಷ್ಟೊಂದು ದೊಡ್ಡ ಮೊತ್ತದ 'ಬಹು'ಮಾನ ಗಳಿಸಿದ ಮೊದಲ ವ್ಯಕ್ತಿ ಎಂಬ ಗೌರವಕ್ಕೂ ಸುಶೀಲ್ ಪಾತ್ರರಾಗಿದ್ದಾರೆ. ಅಷ್ಟೇ ಏಕೆ, ಭಾರತದ ಯಾವುದೇ ಟಿವಿ ಸ್ಪರ್ಧೆಯ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಮೊತ್ತ ಗೆದ್ದ ಮೊದಲ ವ್ಯಕ್ತಿಯೂ ಸುಶೀಲ್ ಆಗಿದ್ದಾರೆ.
ಆರು ತಿಂಗಳ ಹಿಂದಷ್ಟೇ ಮದುವೆಯಾಗಿ ಪತಿ ಎನಿಸಿಕೊಂಡಿದ್ದ ಸುಶೀಲ್, ಈಗ 5 ಕೋಟಿ ಪತಿ ಆಗಿದ್ದಾರೆ! ಕಂಗ್ರಾಟ್ಸ್ ಸುಶೀಲ್!












Click it and Unblock the Notifications