ಐದು ವರ್ಷದ ಹಸುಳೆ ಕಿಡ್ನಾಪ್, ಅತ್ಯಾಚಾರ

ಮಧ್ಯರಾತ್ರಿ 1.30 ರ ವೇಳೆಗೆ ಪಕ್ಕದಲ್ಲಿ ಮಲಗಿದ್ದ ಮಗು ಕಾಣದೆ ತಾಯಿ ಕಂಗಾಲಾಗಿದ್ದಾಳೆ. ಬೆಳಗ್ಗೆ ಪೊಲೀಸ್ ಠಾಣೆಗೆ ತೆರಳಿ ಮಗು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲಾಗಿದೆ.
ನಂತರ ಪೊಲೀಸರಿಗೆ ಮಾಂಧವ ರಸ್ತೆಯಲ್ಲಿ ಜ್ಞಾನತಪ್ಪಿ ಬಿದ್ದಿದ್ದ ಮಗು ಕಾಣಿಸಿದೆ. ತಕ್ಷಣವೇ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.
ಮಗುವಿನಿಂದ ಹೇಳಿಕೆ ಪಡೆದು ಪೋಷಕರ ಸಹಾಯದಿಂದ ಆರೋಪಿಯನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 376 ಹಾಗೂ 384 ಅನ್ವಯ ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ ಪಿ ಶಿವಲಾಲ್ ಜೋಶಿ ಹೇಳಿದ್ದಾರೆ.












Click it and Unblock the Notifications