ಮಾರುಕಟ್ಟೆಯಲ್ಲಿ ಸೆಕ್ಸ್ ವಿಡಿಯೋ ಪ್ರದರ್ಶನ!
ಬೀಜಿಂಗ್,
ಅ. 23: ಭೂಪ ಅವನು ಬೆಕ್ಕಿನ ಥರ ಕಣ್ಣುಮುಚ್ಚಿಕೊಂಡು ಹಾಲು ಕುಡಿಯಿತ್ತೀನಿ ಎಂದು ಕೊಂಡಿದ್ದ ಆದರೆ ಅವನ ವಿಚಿತ್ರ ಖಯಾಲಿ ಜನರಿಂದ ತುಂಬಿದ್ದ ಮಾರುಕಟ್ಟೆ ಪ್ರದೇಶದಲ್ಲಿ ದೊಡ್ಡ ಪರದೆಯ ಮೇಲೆ ಕಣ್ಣಿಗೆ ರಾಚುತ್ತಿತ್ತು. id="toptextpromo">ವಿಷಯ
ಏನಪಾ ಅಂದರೆ ಇಲ್ಲಿನ ಅಡ್ವರ್ಟೈಸಿಂಗ್ ಸಂಸ್ಥೆಯೊಂದರ ಮ್ಯಾನೇರ್ ತನ್ನ ಕಂಪ್ಯೂಟರಿನಲ್ಲಿ ಸೆಕ್ಸ್ ವಿಡಿಯೋ ಹಾಕಿಕೊಂಡು ಕದ್ದುಮುಚ್ಚಿ ಸ್ವಚ್ಚಂದವಾಗಿ ನೋಡುತ್ತಿದ್ದ. ಆದರೆ ಹೊರಗಡೆ ಮಾರುಕಟ್ಟೆಯಲ್ಲಿದ್ದ ಜನ ದೊಡ್ಡ ಪರದೆಯ ಮೇಲೆ ನಿರ್ಭೀರತಾಗಿ ನೋಡುತ್ತಿದ್ದರು. ಮೊನ್ನೆ ಬುಧವಾರ ಸಾಯಂಕಾಲ ಈ ಅಚಾತುರ್ಯ ಸುಮಾರು 10 ನಿಮಿಷ ಕಾಲ ನಡೆದಿದೆ. id='are-slot-1' class='oiad oi-axt oiadv'> id='top-searched-articles'>'ಹೌದು!
ನಾನು ಯಾರಿಗೂ ಗೊತ್ತಾಗದ ಹಾಗೆ ಆಗಾಗ ಕಂಪ್ಯೂಟರಿನಲ್ಲಿ ಸೆಕ್ಸ್ ವಿಡಿಯೋ ನೋಡುತ್ತಿರುತ್ತೇನೆ. ಇಂದು ಸಹ ಹಾಗೆ ಸೆಕ್ಸ್ ವಿಡಿಯೋ ನೋಡತೊಡಗಿದೆ. ಆದರೆ ಹೊರಗಡೆಯಿದ್ದ ಜಾಹೀರಾತಿನ ದೊಡ್ಡ ಪರದೆಗೆ ಸಂಪರ್ಕ ಹೊಂದಿದೆ ಎಂಬುದು ತಿಳಿಯದೇ ಹೋಯಿತು. ಯಾರೋ ಮಜಾ ತೆಗೆದುಕೊಳ್ಳಲು ಬೇಕಂತಲೇ ಹೀಗೆ ಮಾಡಿದ್ದಾರೆ' ಎಂದು ಅಲವತ್ತುಕೊಂಡಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಮಾನಸಿಕ ಕ್ಷೋಭೆ ಉಂಟುಮಾಡಿದ ಅಪರಾಧಕ್ಕಾಗಿ ಸದರಿ ಮ್ಯಾನೇಜರಿಗೆ ಶಿಕ್ಷೆ ಖಚಿತ ಎಂದು ಪೊಲೀಸರು ಹೇಳಿದ್ದಾರೆ.











Click it and Unblock the Notifications