ಬಿಡಿಎ ಬುಲ್ಡೋಜರ್: ಹೆಣ್ಣೂರಿನಲ್ಲಿ 100 ಕೋಟಿ ಆಸ್ತಿ ವಶ
ಬೆಂಗಳೂರು,
ಅ. 22: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ಕಟ್ಟಗಳ ತೆರವು ಕಾರ್ಯಾಚರಣೆಯನ್ನು ಶನಿವಾರ ಮತ್ತೆ ಕೈಗೊಂಡಿದ್ದು ಸುಮಾರು 100 ಕೋಟಿ ರು. ಮೌಲ್ಯದ ಅಕ್ರಮ ಆಸ್ತಿಯನ್ನು ಮತ್ತೆ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. id="toptextpromo"> ಬೆಂಗಳೂಋಉ ಉತ್ತರ ತಾಲೂಕು ಹೆಣ್ಣೂರು ಗ್ರಾಮದ ಸರ್ವೆ ನಂಬರ್ 36/2ರಲ್ಲಿ ಅನಧಿಕೃತವಾಗಿ ತಲೆಯೆತ್ತಿದ್ದ ಒಟ್ಟು 5 ಆರ್ ಸಿಸಿ ಕಟ್ಟಡಗಳನ್ನು ಹಾಗೂ 10 ಮಳಿಗೆಗಳನ್ನು ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ತೆರವುಗೊಳಿಸಲಾಗಿದೆ. ಈ ಸಂದರ್ಭದಲ್ಲಿ, ಪ್ರಾಧಿಕಾರಕ್ಕೆ ಸೇರಿದ ಒಟ್ಟು 1 ಎಕರೆ 39 ಗುಂಟೆ ಪ್ರದೇಶವನ್ನು ಮರುವಶ ಪಡಿಸಿಕೊಂಡಿದೆ. id='are-slot-1' class='oiad oi-axt oiadv'> id='top-searched-articles'>ವಶಪಡಿಸಿಕೊಂಡಿರುವ
ಆಸ್ತಿಗೆ ತಕ್ಷಣ ತಂತಿ ಬೇಲಿಯನ್ನು ಸುತ್ತಿ, ಭದ್ರಪಡಿಸಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರ ನೇತೃತ್ವದಲ್ಲಿ ಎರಡನೆಯ ಅಭಿಯಂತರ ಅಧಿಕಾರಿ ಹಾಗೂ ಉತ್ತರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಂಡವು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಯಶಸ್ವಿ ಕಾರ್ಯಾಚರಣೆ ನಡೆಸಿತು.











Click it and Unblock the Notifications