ಹೈಕೋರ್ಟ್ ಮೆಟ್ಟಲೇರಿದ ಕ್ಯಾನ್ಸರ್ ರೋಗಿ ಕಟ್ಟಾ

Katta Subamanya Naidu
ಬೆಂಗಳೂರು, ಅ.21: ಇಲ್ಲೇ ಪೊಲೀಸರ ನಿಗಾದಲ್ಲೇ ನಿಮ್ಗೆ ಬೇಕಾದ ಟ್ರೀಟ್ಮೆಂಟ್ ತೆಗೆದುಕೊಳ್ಳಿ. ಜಾಮೀನು ನೀಡಿಲ್ಲ ಸಾಧ್ಯವಿಲ್ಲ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಆದೇಶ ನೀಡಿತ್ತು.

ಅದರೆ, ಖಾಸಗಿ ಆಸ್ಪತ್ರೆ ಸೇರದ ಕಟ್ಟಾ, ವಿಕ್ಟೋರಿಯಾದಲ್ಲೇ ಕುಳಿತು, ಯಡಿಯೂರಪ್ಪ ಅವರನ್ನು ವೆಲ್ ಕಮ್ ಮಾಡಿ ಸೆಂಡ್ ಆಫ್ ಮಾಡಿದ ನಂತರ ತನ್ನ ಕಾಯಿಲೆ ನೆನಪಾಗಿದೆ. ಈಗ ವೈದ್ಯಕೀಯ ವರದಿ ಆಧಾರದ ಜಾಮೀನು ನಿರಾಕರಿಸಿದ ಲೋಕಾಯುಕ್ತ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಕೆಐಎಡಿಬಿ ಭೂ ಹಗರಣದ ಆರೋಪಿ ಮಾಜಿ ಸಚಿವ ಕಟ್ಟಾ ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ತಮಗೆ ಜಾಮೀನು ನೀಡುವಂತೆ ಕೋರಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎನ್ ಕೆ ಸುಧೀಂದ್ರ ರಾವ್ ಅವರು ತಿರಸ್ಕರಿಸಿತ್ತು.

ನ್ಯಾಯಾಂಗ ಬಂಧನದಲ್ಲೇ ಪೋಲಿಸ್ ನಿಗಾ ಮತ್ತು ಭದ್ರತೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ ನಾನು ಹೆಚ್ಚಿನ ಚಿಕಿತ್ಸೆ ಪಡೆಯಲು ಮುಂಬೈ ಅಥವಾ ಲಂಡನ್ ಗೆ ಹೋಗುತ್ತೇನೆ ಎಂದು ಕಟ್ಟಾ ತಮ್ಮ ಮನವಿಯಲ್ಲಿ ಹೇಳಿದ್ದಾರೆ.

ಕಟ್ಟಾ ಮುಂದಿನ ಯೋಜನೆ ಏನು? ಮುಂಬೈ ಅಥವಾ ಲಂಡನ್ ..?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+