ವಿಕ್ಟೋರಿಯಾ ಬೇಡ ಲೀಲಾವತಿ ಬೇಕು ಎಂದ ಕಟ್ಟಾ

Katta Subamanya Naidu
ಬೆಂಗಳೂರು, ಅ.21 : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಕ್ಟೋರಿಯಾ ಬಿಟ್ಟ ಮೇಲೆ ಚುರುಕಾದ ಕೆಐಎಡಿಬಿ ಹಗರಣ ಆರೋಪಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವು ವಿಕ್ಟೋರಿಯಾ ಬೇಡ ನನಗೆ ಲೀಲಾವತಿ ಬೇಕು ಎಂದು ಹಟ ಹಿಡಿದಿದ್ದಾರೆ.

Lymphoma ಕಾಯಿಲೆಯಿಂದ ಬಳಲುತ್ತಿರುವ ಕಟ್ಟಾ ಅವರು 2004ರಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಕಟ್ಟಾ ಅವರ ಸ್ಟೆಮ್ ಸೆಲ್ ಗಳನ್ನು ಲಂಡನ್ನಿನ ಆಸ್ಪತ್ರೆಯೊಂದರಲ್ಲಿ ಸಂಗ್ರಹಿಸಿಡಲಾಗಿದೆ.

ಅಗತ್ಯ ಬಿದ್ದರೆ ಲಂಡನ್ ಗೂ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಅವರಿಗೆ ಮುಂಬೈ ಹಾಗೂ ಲಂಡನ್ ಗೆ ತೆರಳಲು ಅನುಮತಿ ನೀಡಬೇಕು ಹಾಗೂ ಜಾಮಾಎನು ಮಝೂರು ಮಾಡಬೇಕು ಎಂದು ಕಟ್ಟಾ ಪರ ವಕೀಲ ರವಿ ನಾಯಕ್ ಮನವಿ ಮಾಡಿದ್ದಾರೆ.

ಆದರೆ ನ್ಯಾಯಾಂಗ ಬಂಧನದಲ್ಲಿರುವ ಕಟ್ಟಾ ಅವರಿಗೆ ಜೈಲಿನ ಅಧಿಕಾರಿಗಳ ಅನುಮತಿ ದೊರೆಯುವುದು ತಡವಾಗಲಿದೆ. ಹೈಕೋರ್ಟ್ ನಲ್ಲಿ ಕಟ್ಟಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆದು ಮುಂದಿನ ಆದೇಶ ಹೊರಬೀಳುವ ತನಕ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಪರಪ್ಪನ ಅಗ್ರಹಾರದ ಜೈಲು ಅಧಿಕಾರಿ ಟಿಎಚ್ ಲಕ್ಷ್ಮಿ ನಾರಾಯಣ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+